Header Ads
Breaking News

ಸುಳ್ಯದ ಬೆಳ್ಳಾರೆಯಲ್ಲಿ ವಿಸ್ಮಯಗೊಳಿಸಿದ ಕೀಟ ಪ್ರಪಂಚ

ಸದರ್ನ್ ಬರ್ಡವಿಂಗ್ ಚಿಟ್ಟೆ, ಹುಲಿ ದುಂಬಿ, ನಡೆಯುವ ಕಡ್ಡಿ ಕೀಟ, ತೊಗಟೆ ಮಿಡತೆಗಳು, ನೀಲಿ ಹುಲಿ ಚಿಟ್ಟೆ, ಕಾಫಿ ಮಿಡತೆ, ರಸ ಹೀರುವ ಪತಂಗ, ಬೋರಂಗಿ ಹುಳು, ಉದ್ದ ನಾಲಿಗೆ ನೊಣ, ಜೇನು ನೊಣ, ಬಣ್ಣ ಬಣ್ಣದ ಪತಂಗಗಳು, ವಿವಿಧ ದೇಶಗಳ ವಿವಿಧ ಪ್ರಭೇದದ ಕೀಟಗಳು, ಹುಳುಗಳನ್ನು ನೋಡುತ್ತಿದ್ದರೆ ಒಂದು ದಿನವೂ ಸಾಲುವುದಿಲ್ಲ ಎನ್ನುವಷ್ಟು ಪ್ರಭೇದದ ಕೀಟಗಳ ಲೋಕವನ್ನೇ ಅನಾವರಣಗೊಳಿಸಿದ್ದು ಮಕ್ಕಳ ಬೇಸಿಗೆ ಶಿಬಿರ.

ಸುಳ್ಯದ ಬೆಳ್ಳಾರೆಯ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರವನ್ನು ಕೀಟ ಪ್ರಪಂಚ ವಿಸ್ಮಯಗೊಳಿಸಿದೆ. ವಿಶ್ವದ ವಿವಿಧ ಕಡೆಯ ಸಾವಿರಾರು ಪ್ರಭೇದದ ಕೀಟಗಳ ಪ್ರದರ್ಶನ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕೀಟಗಳ ಲೋಕವನ್ನೇ ಅನಾವರಣಗೊಳಿಸಿತು. ಕೀಟಗಳ ಬಣ್ಣ, ಆಕಾರ, ಗಾತ್ರ, ಒಂದಕ್ಕಿಂತಲೂ ಒಂದು ಭಿನ್ನವಾಗಿದೆ. ಪಶ್ಚಿಮ ಘಟ್ಟದ ದಟ್ಟಕಾಡು, ಮಲೆನಾಡಿನ ಕೃಷಿ ಭೂಮಿ, ಹಾಗೂ, ಬಯಲು ಸೀಮೆ ಸೇರಿದಂತೆ ವಿಶ್ವದ ನಾನಾ ಕಡೆಯಲ್ಲಿ ಮೂಡಿಗೇರೆಯ ತೋಟಗಾರಿಕಾ ಮಹಾವಿದ್ಯಾಲಯದ ವಿವಿಧ ಸಂಶೋಧಕರು ಸಂಗ್ರಹಿಸಿರುವ ಕೀಟಗಳನ್ನು ಪ್ರದರ್ಶನ ಮಾಡಲಾಯಿತು.

ಮೂಡಿಗೆರೆಯ ತೋಟಗಾರಿಕೆ ಕಾಲೇಜಿನ ಸಂಶೋಧಕರು ವಿವಿದೆಡೆ ಸುತ್ತಾಡಿ ಕೀಟಗಳ ಪ್ರಭೇದವನ್ನು ಸಂಗ್ರಹಿಸಿದ್ದು, ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರೇವಣ್ಣ ರೇವಣ್ಣವರ್ ಮತ್ತು ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಕೀಟ ವಿಸ್ಮಯ ಪ್ರದರ್ಶನದ ಮೂಲಕ ಕೀಟ ಸಂಪತ್ತು ಎಲ್ಲರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದ್ದಾರೆ.

ಈ ಬಗ್ಗೆ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ. ರೇವಣ್ಣ ರೇವಣ್ಣವರ್ ಪತ್ರಿಕ್ರಿಯೆ ನೀಡಿ ಜಗತ್ತಿನಲ್ಲಿ 10 ಲಕ್ಷ ಮಿಲಿಯನ್ ಪ್ರಭೇದಗಳಿಗೆ ಸೇರಿದ ಜೀವಿಗಳಿವೆ. ಆದರೆ ಇಲ್ಲಿಯವರೆಗೆ ನಾವು 1.2 ಮಿಲಿಯನ್ ಜೀವಿಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ಅದರಲ್ಲಿ ಕೇವಲ 10 ಶೇಕಡಾ ಜೀವಿ ಪ್ರಭೇದಗಳ ಅಧ್ಯಯನಗಳನ್ನು ಸಂಶೋಧಕರು ಮಾಡಿದ್ದಾರೆ ಉಳಿದ 90% ಕೀಟಗಳ ಅಧ್ಯಯನ ಜಗತ್ತಿನಲ್ಲಿ ಆಗಿಲ್ಲ. ಉಳಿದ 90%1 ಜೀವಿ ಕೀಟಗಳ ಬಗ್ಗೆ ಸಂಶೋಧನೆ ನಡೆದಿಲ್ಲ. ಕೀಟ ಪ್ರಭೇದಗಳು ನಶಿಸುತ್ತಿದೆ ಎಂದ್ರು..

ಶಿಬಿರದ ವಿದ್ಯಾರ್ಥಿ ಶ್ರೀಚರಣ್ ಪ್ರತಿಕ್ರಿಯೆ ನೀಡಿ ಕೀಟಗಳ ಪ್ರದರ್ಶನದಿಂದ ನಮ್ಮಂತ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಯಿತು. ಇದಕ್ಕೆ ಮೊದಲು ನಾವು ಕೇವಲ ಪಠ್ಯಗಳಲ್ಲಿ ಮಾತ್ರ ಓದಿ ತಿಳಿಯುತ್ತಿದ್ದೇವು. ಈಗ ಇದನ್ನು ಸ್ವತಃ ನೋಡುವ ಭಾಗ್ಯ ಲಭಿಸಿತು ಎಂದ್ರು..

Related posts

Leave a Reply

Your email address will not be published. Required fields are marked *