Header Ads
Header Ads
Breaking News

ಸುಳ್ಯ:ಸರಕಾರಿ ಅಧಿಕಾರಿಯಿಂದ ಮಕ್ಕಳಿಗೆ ಯಕ್ಷಗಾನ ತರಬೇತಿ

ಯಕ್ಷಗಾನ ಕಲೆ ಅನ್ನೋದೆ ಹಾಗೆ. ಅದು ಕೆಲವರಿಗೆ ಸಿದ್ದಿಸಿಬಿಡುತ್ತದೆ. ಎಂತದ್ದೆ ಹುದ್ದೆಯಲ್ಲಿದ್ದರೂ ಯಕ್ಷಗಾನ ಕಲೆಯ ಬಲೆಯಿಂದ ಹೊರಬರಲು ಮಾತ್ರ ಸಾಧ್ಯವಾಗುವುದಿಲ್ಲ. ಸರಕಾರಿ ಅಧಿಕಾರಿಯೊಬ್ಬರು ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯ ಧಾರೆಯುತ್ತಿದ್ದಾರೆ.

ಸರಕಾರಿ ಅಧಿಕಾರಿಗಳ ಪೈಕಿ ಸುಳ್ಯ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್‌ಪ್ರಸಾದ್ ಕೊಂಚ ಭಿನ್ನ. ಸರಕಾರಿ ಕೆಲಸಗಳ ಜಂಜಾಟದ ಮಧ್ಯೆ ಬಿಡುವು ಸಿಕ್ಕಗಾಗೆಲ್ಲಾ ಮಕ್ಕಳಿಗೆ ಯಕ್ಷಗಾನ ತರಗತಿ ನೀಡುತ್ತಿದ್ದಾರೆ. ಸರಕಾರಿ ಅಧಿಕಾರಿಗಳಲ್ಲಿ ಶ್ಯಾಮ್ ಪ್ರಸಾದ್ ಅವರು ಸಂಪೂರ್ಣ ಭಿನ್ನವಾಗಿ ಕಾಣುತ್ತಾರೆ. ಕೆಲಸದ ಒತ್ತಡಗಳ ಮಧ್ಯೆ ಕಲೆಯ ಉಳಿವಿಗೆ ಸಮಯ ನೀಡುತ್ತಿದ್ದಾರೆ. ಸರಕಾರಿ ಉದ್ಯೋಗ ಸಿಗುವ ಮೊದಲು ಯಕ್ಷಗಾನ ಚಟುವಟಿಕೆಗಳಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು.

ಸುಳ್ಯದ ಮರ್ಕಂಜದವರಾದ ಶ್ಯಾಮ್‌ಪ್ರಸಾದ್ ಅವರು ಎಲಿಮಲೆಯ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಪ್ರತಿವರ್ಷ ಯಕ್ಷಗಾನ ಕಲಿಸುತ್ತಿದ್ದಾರೆ. ಶ್ಯಾಮ್‌ಪ್ರಸಾದ್ ಅವರದ್ದು ಯಕ್ಷಗಾನದಲ್ಲಿ ಬಹುಮುಖ ವ್ಯಕ್ತಿತ್ವ. ಯಕ್ಷಗಾನ ಹಾಡುಗಾರಿಗೆ, ಚೆಂಡೆ ಮತ್ತು ನಾಟ್ಯ ಹಾಗೂ ಅರ್ಥಗಾರಿಗೆಯ ಮೂಲಕ ಯಕ್ಷಗಾನದಲ್ಲಿ ಆಲ್‌ರೌಂಡ್ ಕಲಾವಿದ. ಸಂಜೆಯ ಅವಧಿ ಮತ್ತು ರಜಾ ದಿನಗಳಲ್ಲಿ ಅಲ್ಲದೇ ರಾತ್ರಿಯ ಸಮಯದಲ್ಲಿ ಮನೆಯಲ್ಲಿಯೆ ಯಕ್ಷಗಾನ ತರಬೇತಿ ಕೊಡುತ್ತಿದ್ದಾರೆ. ಅಲ್ಲದೇ ಕಾಲಾವಧಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಡೆಯುವ ಯಕ್ಷಗಾನಗಳಿಗೆ ಹೋಗುತ್ತಿದ್ದಾರೆ.

ಮಕ್ಕಳ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಪಣತೊಟ್ಟಿರುವ ಶ್ಯಾಮ್‌ಪ್ರಸಾದ್ ಅವರು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಆಸೆಯಂತೆ ಯಕ್ಷಗಾನ ತಂಡ ಕಟ್ಟಲು ಶ್ರಮಿಸುತ್ತಿದ್ದಾರೆ.

ಈ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್‌ಪ್ರಸಾದ್ ಪ್ರತಿಕ್ರಿಯೆ ನೀಡಿ ಸರಕಾರಿ ಉದ್ಯೋಗ ಸಿಗುವ ಮೊದಲು ಎಲಿಮಲೆ ಶಾಲೆ ಮತ್ತು ಇತರ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಭೇತಿ ನೀಡುತ್ತಿದ್ದೆ. ಈಗ ಸರಕಾರಿ ಕೆಲಸಗಳ ಜಂಜಾಟದಲ್ಲಿ ಯಕ್ಷಗಾನ ಕಲಿಸಿಕೊಡಲು ಸಮಯ ಸಿಗುತ್ತಿಲ್ಲ. ಆದರೂ ರಜೆಯ ದಿನಗಳಲ್ಲಿ ಅಲ್ಲದೇ ಮನೆಯಲ್ಲಿ ರಾತ್ರಿ ಯಕ್ಷಗಾನ ತರಬೇತಿ ನೀಡುತ್ತಿದ್ದೇನೆ. ಕಾರ್ಯಕ್ರಮಗಳಿಗೆ ಸಿಮಿತವಾಗಿ ಕಾಲಾವಧಿ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಿದ್ದೇನೆ. ಶಿಕ್ಷಕರ ಆಸಕ್ತಿಯ ಮೇರೆಗೆ ತರಬೇತಿ ನೀಡುತ್ತಿದ್ದೇನೆ.

ಶಿಕ್ಷಕ ವಸಂತ ನಾಯಕ್ ಮಾತನಾಡಿ ಸರಕಾರಿ ಶಾಲೆಯಲ್ಲಿ ಯಕ್ಷಗಾನ ತಂಡ ಕಟ್ಟಬೇಕು ಎಂಬುದು ಹಲವು ವರ್ಷಗಳ ಹಿಂದಿನ ಕನಸು. ಇದಕ್ಕಾಗಿ ಯೋಗ್ಯ ಗುರುಗಳನ್ನು ಹುಡುಕುತ್ತ ಇದ್ದೇವು. ಯಕ್ಷಗಾನದಲ್ಲಿ ಶೃದ್ಧೆ ಇರುವ ಮಕ್ಕಳನ್ನು ಆರಿಸಿ ತಂಡ ಮಾಡಿದ್ದೇವೆ. ಗಂಡು ಕಲೆಯಾದ ಯಕ್ಷಗಾನವನ್ನು ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ.

ಯಕ್ಷಗಾನ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ತುಶಿತಾ ಪ್ರತಿಕ್ರೀಯೆ ನೀಡಿ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಿಯುತ್ತಿದ್ದೇವೆ. ಗುರುಗಳು ಅವರ ಸರಕಾರಿ ಕೆಲಸಗಳ ಒತ್ತಡಗಳ ಮಧ್ಯೆ ಕೂಡ ಯಕ್ಷಗಾನವನ್ನು ಒಳ್ಳೆಯ ರೀತಿಯಲ್ಲಿ ಕಲಿಸುತ್ತಿದ್ದಾರೆ. ಇದಕ್ಕೆ ಶಾಲೆಯ ಎಲ್ಲಾ ಶಿಕ್ಷಕ ವೃಂದ ಸಹಕಾರ ನೀಡುತ್ತಿದೆ ಎಂದರು.

ದೂರವಾಣಿ ಸಂಖ್ಯೆ :
1. ಶ್ಯಾಮ್‌ಪ್ರಸಾದ್ ಮರ್ಕಂಜ :9741489207

2. ವಸಂತ ನಾಯಕ್ ಶಿಕ್ಷಕ ಎಲಿಮಲೆ ಪ್ರೌಢಶಾಲೆ – 9611817540

Related posts

Leave a Reply