Breaking News

ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,  ಅಧ್ಯಕ್ಷ ದೇರಣ್ಣ ಗೌಡ, ಉಪಾಧ್ಯಕ್ಷೆಯಾಗಿ ಸುಕನ್ಯ ಭಟ್ ಆಯ್ಕೆ

ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಜಾಲ್ಸೂರು ಕೃಷಿಕರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಅಡ್ಡಂತಡ್ಕ ದೇರಣ್ಣ ಗೌಡ, ಉಪಾಧ್ಯಕ್ಷೆಯಾಗಿ ಅಮರಮುಡ್ನೂರು ಕ್ಷೇತ್ರದಿಂದ ಗೆದ್ದಿದ್ದ ಸುಕನ್ಯಾ ಭಟ್ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ.ಕ್ಷ ಸ್ಥಾನಕ್ಕೆ ದೇರಣ್ಣ ಗೌಡ ನಾಮಪತ್ರ ಸಲ್ಲಿಸಿದ್ದರು. ಎಪಿಎಂಸಿ ಸದಸ್ಯರುಗಳಾದ ಜಯಪ್ರಕಾಶ್ ಕುಂಚಡ್ಕ ಸೂಚಕರಾಗಿ ಹಾಗೂ ಮೋನಪ್ಪ ಗೌಡ ಐವತ್ತೊಕ್ಲು ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಮರಮುಡ್ನೂರು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದ ಸುಕನ್ಯಾ ಭಟ್ ನಾಮಪತ್ರ ಸಲ್ಲಿಸಿದರು. ಸದಸ್ಯರಾದ ವಿನಯಕುಮಾರ್ ಮುಳುಗಾಡು ಸೂಚಕರಾಗಿ ಹಾಗೂ ಸಂತೋಷ್ ಜಾಕೆ ಅನುಮೋದಕರಾಗಿದ್ದರು. ನಿಗದಿತ ಮಧ್ಯಾಹ್ನ ೧ ಗಂಟೆಗೆ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಂ. ಎಂ. ಗಣೇಶ್ ಅವರು ತಲಾ ಓರ್ವರೇ ಸದಸ್ಯರು ಉಮೇದುವಾರಿಕೆ ಸಲ್ಲಿಸಿದ್ದರಿಂದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಮುಂದಿನ ೨೦ ತಿಂಗಳಿಗೆ ಹುದ್ದೆಯ ಅಯ್ಕೆ ಪ್ರಕ್ರಿಯೆ ನಡೆದಿರುವುದಾಗಿ ಘೋಷಿಸಿದರು. ಈ ಸಂದರ್ಭ ಎಪಿಎಂಸಿ ಕಾರ್ಯದರ್ಶಿ ವಿಮಲಾ ಬಿ., ಜಿ. ಪಂ. ಸದಸ್ಯುರಗಳಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ತಾ. ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮತ್ತಿತರರಿದ್ದರು.

Related posts

Leave a Reply