Header Ads
Breaking News

ಸುಳ್ಯ ಕೆವಿಜಿಯ ಎನ್‌ಎಂಸಿಯಲ್ಲಿ ಉಚಿತ ಕ್ರೀಡಾ ಬೇಸಿಗೆ ಶಿಬಿರ ಆಯೋಜನೆ: ಮೇ| ಗಿರಿಧರ ಗೌಡ

ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಆಶ್ರಯದಲ್ಲಿ ನೆಹರೂ ಮೆಮೋರಿಯಲ್ ಕಾಲೇಜುನ ವತಿಯಿಂದ ಉಚಿತ ಕ್ರೀಡಾ ಬೇಸಿಗೆ ಶಿಬಿರ ಮತ್ತು ಆಯ್ಕೆ ಪ್ರಕ್ರಿಯೇ ಎನ್‍ಎಂಸಿ ಕ್ರೀಡಾಂಗಣದಲ್ಲಿ 2 ಹಂತಗಳಲ್ಲಿ ಮಾ 28ರಿಂದ ನಡೆಯಲಿದೆ. ಶಿಬಿರದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ರೀಡಾ ಕೋಟದಡಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ನೆಹರೂ ಮೆಮೋರಿಯಲ್ ಪ್ರಾಂಶುಪಾಲ ಮೇ| ಗಿರಿಧರ ಗೌಡ ಹೇಳಿದರು.

ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಚಿತ ಕ್ರೀಡಾ ಬೇಸಿಗೆ ಶಿಬಿರ ಕಬಡ್ಡಿ, ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಎರಡು ಹಂತಗಳಲ್ಲಿ ಉಚಿತ ತರಬೇತಿ ನಡೆಯಲಿದೆ. ಪ್ರಥಮ ಹಂತ ಮಾ. 26 ರಿಂದ 30ರ ವರೆಗೆ ಪಿಯುಸಿ ಉತ್ತೀರ್ಣರಾದವರಿಗೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಿಗೆ ಕ್ರೀಡಾಕೋಟದಡಿ ಉಚಿತ ಶಿಕ್ಷಣಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ದ್ವಿತೀಯ ಹಂತದಲ್ಲಿ ಎ. 15ರಿಂದ 17ರ ವರೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದವರಿಗೆ ಕ್ರೀಡಾಕೂಟದಡಿ ಪಿಯು ಶಿಕ್ಷಣಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಬಡ್ಡಿ, ಅಥ್ಲೆಟಿಕ್ಸ್ ಮತ್ತು ವೈಟ್ ಲಿಫ್ಟಿಂಗ್ ನಲ್ಲಿ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದು, ಬಾಲಿಬಾಲ್ ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಎನ್‍ಎಂಪಿಯು ಕಾಲೇಜಿನ ಪ್ರಾಂಶುಪಾಲೆ ಮಮತಾ. ಕೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ.ಸೀತಾರಾಮ, ವೈಟ್ ಲಿಪ್ಟರ್ ತರಬೇತುದಾರ ಎ. ರಮೇಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *