Header Ads
Header Ads
Breaking News

ಸುಳ್ಯ ತಾಲೂಕಿನಲ್ಲಿ ಕಾಡು ಬೆಳೆಸುವಿಕೆ, ಅರಣ್ಯ ಇಲಾಖೆ ನೇತೃತ್ವದಲ್ಲಿ ತಿಂಗಳ ಅಭಿಯಾನ

ನಾಡು ಹಸಿರಾಗಿಸಲು ನೀರಿಗಾಗಿ ಅರಣ್ಯ ಬೆಳೆಸಲು ಪಣ ತೊಟ್ಟಿರುವ ಅರಣ್ಯ ಇಲಾಖೆಯು ಸುಳ್ಯ ತಾಲೂಕಿನಲ್ಲಿ ಅರಣ್ಯ ಅಭಿಯಾನ ಜಾಗೃತಿಯನ್ನು ನಡೆಸಿದೆ.
ಪರಿಸರ, ಅರಣ್ಯ ನಾಶದಿಂದ ಪ್ರತಿ ವರ್ಷ ಭೂಮಿ ಬತ್ತಿ ಬರಡಾಗಿ ನೀರಿನ ಬವಣೆ ಉಂಟಾಗುತ್ತಿದೆ ಎಂಬುವುದನ್ನು ಮನಗಂಡಿರುವ ಅರಣ್ಯ ಇಲಾಖೆ ಮರ ಗಿಡಗಳು ನಾಶವಾಗಿ ಬೋಳಾಗಿರುವ ಭೂಮಿಯನ್ನು ಮತ್ತೆ ಹಸಿರಾಗಿಸಲು, ಬತ್ತಿ ಹೋಗುತ್ತಿರುವ ಜೀವ ಜಲ ಉಳಿಸಲು ಮತ್ತು ನೀರಿಗಾಗಿ ಅರಣ್ಯ ಬೆಳೆಸಲು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಅರಣ್ಯ ಅಭಿಯಾನದ ಅಂಗವಾಗಿ ಸುಳ್ಯ ತಾಲೂಕಿನಲ್ಲಿ ತಿಂಗಳ ಪೂರ್ತಿ ಅಭಿಯಾನ ಕಾರ್ಯಕ್ರಮ ನಡೆಯುತ್ತಿದೆ. ಅದು ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿದೆ.

Related posts

Leave a Reply