Header Ads
Breaking News

ಸುಳ್ಯ ತಾಲೂಕಿನ ಗೂನಡ್ಕದ ದೊಡ್ಡಡ್ಕದಲ್ಲಿ ಕೊರಗಜ್ಜನ ಪವಾಡ

ಸುಳ್ಯದ ಗೂನಡ್ಕ ದಲ್ಲಿ ಮಾ 21 ರಂದು ಎಂದಿನಂತೆ ಕಾಲಾವದಿ ಜಾತ್ರೋತ್ಸವ ನಡೆದಿತ್ತು, ಅದರೆ ಈ ಬಾರಿ 12 ಕೊರಗಜ್ಜ ದೈವದ ನೇಮ ನಡೆಸಲು ಆಡಳಿತ ಸಮಿತಿ ನಿರ್ಧಾರ ಮಾಡಿತ್ತು, ಅದರಂತೆ 11 ಹರಿಕೆ ಮತ್ತು 1 ಮಾಮುಲಿ ಕೋಲ ನಡೆಸಲು ಎಲ್ಲಾ ಸಿದ್ದತೆ ನಡೆಸಿದ್ದರು. 12 ದೈವಗಳಿಗೆ ಬೇಕಾಗುವ ಗಂಟೆ ಹಾಗೂ ಇನ್ನಿತರ ಪರಿಕರ ಸಿದ್ದ ಪಡಿಸಿದ್ದರು, ಅದರಂತೆ ಎಲ್ಲವೂ 12 ದೈವದ ಕೋಲ ಸಿದ್ದತೆ ಆಗಿತ್ತು ಆದರೆ ದೈವ ನಡೆಯತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಹಲವು ಮಂದಿಗೆ 13 ದೈವಗಳು ಗೋಚರವಾಗತೊಡಗಿತು ಆದರೆ ಆಡಳಿತ ಮಂಡಳಿಯವರಿಗೆ ಇದರ ಅರಿವಾಗಿರಲಿಲ್ಲ, ಅಲ್ಲಿದ್ದವರ ಮೊಬೈಲ್ ಫೋನ್‍ಗಳಲ್ಲಿ ವೀಡಿಯೋ ಸಂಗ್ರಹಿಸಿದ ನಂತರ ಅಲ್ಲಿಯೂ 13 ದೈವಗಳು ಕಾಣ ತೊಡಗಿತು. ದೈವ ನರ್ತನಕ್ಕೆ ಬಂದವರು ಒಟ್ಟು 15 ಮಂದಿ ಅದರಲ್ಲಿ ಒಬ್ಬರು ಅದೇ ದಿವಸ ಉಳಿದವರನ್ನು ಬಿಟ್ಟು ಅವರ ವಾಹನ ತೆಗೆದುಕೊಂಡು ಹೋಗಿ ದ್ದಾರೆ. ಉಳಿದ 12 ಮಂದಿ ದೈವನರ್ತಕರು, ಇಬ್ಬರು ಇತರರು ಆದರೆ ದೈವ ನರ್ತನ ವೇಳೆ 13 ಹೇಗಾಯಿತು ಎನ್ನುವುದು ಸ್ಥಳೀಯರ ಕುತೂಹಲ, ಇದೀಗ ಪ್ರಶ್ನೆ ಚಿಂತನೆಯಲ್ಲಿ ಇದು ಕೊರಗಜ್ಜ ದೈವದ ಪವಾಡ ಎಂದು ಜ್ಯೋತಿಷರು ತಿಳಿಸಿದ್ದಾರೆ ಎನ್ನುತ್ತಾರೆ ಆಡಳಿತ ಮಂಡಳಿಯವರು.

Related posts

Leave a Reply

Your email address will not be published. Required fields are marked *