Header Ads
Header Ads
Breaking News

ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಯೋಜನೆಗಳ ಅನುದಾನ ಹಿಂದಕ್ಕೆ ಹೋಗದಂತೆ ಕ್ರಮ ವಹಿಸಿ ಅನುದಾನ ಲಾಪ್ಸ್ ಆದರೆ ಇಲಾಖೆಗಳೆ ಹೊಣೆ ಶಾಸಕ ಎಸ್. ಅಂಗಾರ ಹೇಳಿಕೆ

ಸುಳ್ಯ ತಾಲೂಕಿಗೆ 2016-17ನೇ ಸಾಲಿನ ಯೋಜನೆಗಳಿಗೆ ಬಿಡುಗಡೆಗೊಂಡಿರುವ ಅನುದಾನ ಯಾವುದೆ ಕಾರಣಕ್ಕೂ ಹಿಂದಕ್ಕೆ ಹೋಗಬಾರದು. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದರೆ ಆಯಾ ಇಲಾಖೆಯ ಅಧಿಕಾರಿಗಳೇ ಹೊಣೆಗಾರರು ಎಂದು ಶಾಸಕ ಎಸ್. ಅಂಗಾರ ಎಚ್ಚರಿಕೆ ನೀಡಿದ್ದಾರೆ.

ಅವರು ಸುಳ್ಯ ತಾಲೂಕು ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿಗೆ ಮಂಜೂರು ಗೊಂಡಿರುವ ಕಾಮಗಾರಿಗಳನ್ನು ಆದಷ್ಟೂ ಬೇಗ ಮಾಡಿ ಮುಗಿಸಬೇಕು. ಈ ಯೋಜನೆಗಳಿಗೆ ಬಿಡುಗಡೆಯಾದ ಅನುದಾನಗಳು ಲಾಪ್ಸ್ ಆಗದಂತೆ ಎಲ್ಲಾ ಇಲಾಖೆಗಳು ಗಮನ ನೀಡಬೇಕು.ಸಾರ್ವಜನಿಕರಿಗೆ ಯೋಜನೆಗಳ ಸದ್ಬಳಕೆ ಮಾಡಿಕೊಡಬೇಕು ಎಂದು ಹೇಳಿದರು. ಇದಕ್ಕೆ ನಗರ ಪಂಚಾಯತ್ ಯಾವುದೇ ಕ್ರಮ ಜರುಗಿಸಿಲ್ಲ. ಇದಕ್ಕೆ ಉತ್ತರಿಸಿದ ನ.ಪಂ ಆರೋಗ್ಯಾಧಿಕಾರಿ ಈ ಬಗ್ಗೆ ಈಗಾಗಲೇ ಪರಂಬೋಕು ಸ್ಥಳದಲ್ಲಿ ಕಟ್ಟುತ್ತಿರುವ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ನಿರ್ಮಾಣ ಆಗಿರುವ ಅನಧಿಕೃತ ಕಟ್ಟಡಗಳ ಮೇಲೆ ಕ್ರಮಕೈಗೊಳ್ಳಲು ಸಕ್ಷಮ ಪ್ರಾಧಿಕಾರದಿಂದ ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದರು.

Related posts

Leave a Reply