Header Ads
Header Ads
Breaking News

ಸುಳ್ಯ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ, ಡೀಮ್ಡ್ ಫಾರೆಸ್ಟ್ ಸ್ಥಳಗಳ ದಾಖಲೆಯ ಮಾಹಿತಿಗೆ ಆಗ್ರಹ


ತಾಲೂಕಿನಲ್ಲಿ ಡೀಮ್ಡ್ ಫಾರೆಸ್ಟ್‌ನಿಂದ ಹಲವು ಕಡೆ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಅದು ಸರಕಾರಿ ಜಾಗ ಆಗಿದ್ದರೂ ಇದರ ಬಗ್ಗೆ ಅರಣ್ಯ ಇಲಾಖೆ ವಿನಾ ಕಾರಣ ಸರ್ವೇ ನಡೆಸುವಾಗ ಇದು ಡೀಮ್ಡ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಗೊಂದಲ ಉಂಟು ಮಾಡುತ್ತಿದೆ. ಕೂಡಲೇ ಅರಣ್ಯ ಇಲಾಖೆ ಡೀಮ್ಡ್ ಫಾರೆಸ್ಟ್‌ಗಳ ಬಗ್ಗೆ ಸ್ಥಳಗಳ ವರದಿ ನೀಡಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಧುಕುಮಾರ್ ಸೂಚನೆ ನೀಡಿದ್ದಾರೆ.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಡೀಮ್ಡ್ ಫಾರೆಸ್ಟ್ ಅಂದರೆ ಅದು ಸರಕಾರಿ ಜಾಗ. ಮರಗಳು ಹೆಚ್ಚು ಇರುವ ಸರಕಾರಿ ಜಾಗವನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸಲು ಸರಕಾರ ಕಾನೂನು ಮಾಡಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳು ಇಲ್ಲದ ಕಡೆ ಇರುವ ಜಾಗವನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದು ಅರಣ್ಯ ಇಲಾಖೆಯ ಕಾನೂನಿನ ವಿರುದ್ದವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆ ಸೂಕ್ತ ದಾಖಲೆಗಳನ್ನು ಕೂಡಲೇ ನೀಡಿದ್ದಲ್ಲಿ ಕಂದಾಯ ಇಲಾಖೆ ಸೂಕ್ತ ರೀತಿಯಲ್ಲಿ ಸರ್ವೇ ಕಾರ್ಯ ಮಾಡಿಕೊಡಲಾಗುವುದು. ಇಲ್ಲಿಯವರೆಗೆ ವರದಿ ಬಂದಿಲ್ಲ ಎಂದು ತಹಶೀಲ್ದಾರ್ ಎಂ. ಎಂ. ಗಣೇಶ್ ಹೇಳಿದರು. ಡೀಮ್ಡ್ ಫಾರೆಸ್ಟ್ ಸ್ಥಳಗಳ ದಾಖಲೆಗಳನ್ನು ಒಂದು ವಾರದ ಒಳಗೆ ಸಲ್ಲಿಸಲು ಮುಖ್ಯ ಕಾರ್ಯ ನಿರ್ವಾಹಣದಿಕಾರಿ ಸೂಚಿಸಿದರು.
ತಾಲೂಕಿನ ಎಡಮಂಗಲ, ಪಂಜದಲ್ಲಿ ಎಚ್೧ ಎನ್೧, ಡೆಂಗ್ಯೂ ಜ್ವರದ ಲಕ್ಷಣ ಕಂಡು ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ, ಕೊಡುವ ಕೆಲಸ, ಫಾಗಿಂಗ್, ಸ್ವಚ್ಚತೆ ಕಪಾಡುವ ಕೆಲಸ ಆಗುತ್ತಿದೆ ಎಂದು ಆರೋಗ್ಯಾಧಿಕಾರಿ ಸಭೆಗೆ ತಿಳಿಸಿದರು. ಮಳೆಗಾಲದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ರಸ್ತೆಗಳು ಮಳೆಗೆ ಹಾನಿ ಆಗುತ್ತಿದೆ. ತಕ್ಷಣಕ್ಕೆ ದುರಸ್ತಿ ಮಾಡಬೇಕಾದರೆ ಇಲಾಖೆಯಲ್ಲಿ ಸಹಾಯಧನ ಇದೆಯ ಎಂದು ರಾಧಾಕೃಷ್ಣ ಬೊಳ್ಳುರು ಪ್ರಶ್ನಿಸಿದರು. ತಾಲೂಕಿನಲ್ಲಿ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಆಗಿಲ್ಲ. ಸಮಾಜ ಕಲ್ಯಾಣ ಇಲಾಖೆಯ ವಿಧ್ಯಾರ್ಥಿ ನಿಲಯಗಳ ಪ್ರವೇಶಾತಿ ಬಗ್ಗೆ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಹೆಚ್ಚಿನವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದರಿಂದ ಬಡ ಮಕ್ಕಳಿಗೆ ಹಾಸ್ಟೇಲ್ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ತಾ. ಪಂ ಉಪಾಧ್ಯಕ್ಷೆ ಸುಭಧಾ ಎಸ್. ರೈ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply