Header Ads
Breaking News

ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಸಭೆ : 2ಸಾವಿರ ರೈತರ ಖಾತೆಗೆ ಸಾಲಮನ್ನಾ ಪಾವತಿ

ಸುಳ್ಯ ತಾಲೂಕಿನಲ್ಲಿ 14ಸಾವಿರದ 114 ಮಂದಿ ರೈತರು ಅರ್ಹಫಲಾನುಭವಿಗಳು ಸರಕಾರದ ಸಾಲಮನ್ನಾ ಯೋಜನೆಗೆ ಒಳಪಡಲಿದ್ದು. ಅದರಲ್ಲಿ 2ಸಾವಿರ ರೈತರಿಗೆ ಖಾತೆ ಸಾಲಮನ್ನಾ ಹಣ ಪಾವತಿಯಾಗಿದೆ. ಆಧಾರ್ ಲಿಂಕ್ ಮತ್ತು ಇತರ ಸಮಸ್ಯೆಯಿಂದ 4ಸಾವಿರದ 965 ಮಂದಿ ರೈತರ ಹಣ ಖಾತೆಗೆ ಬೀಳದೆ ವಾಪಸ್ ಆಗಿದೆ. ಸುಳ್ಯ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸಾಲಮನ್ನಾದ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಶಾಸಕ ಎಸ್.ಅಂಗಾರ ಪ್ರತಿಕ್ರಿಯಿಸಿ, ಯಾವಾವ ಸಹಕಾರಿ ಸಂಘದಲ್ಲಿ ಎಷ್ಟು ರೈತರಿಗೆ ಸಿಕ್ಕಿದೆ. ಇನ್ನು ಎಷ್ಟು ಮಂದಿ ಬಾಕಿ ಇದ್ದಾರೆ ಎನ್ನುವ ಬಗ್ಗೆ ಪಟ್ಟಿ ನೀಡಬೇಕು. ಅಲ್ಲದೆ ಪ್ರತಿಯೊಬ್ಬ ಫಲಾನುಭವಿ ರೈತರಿಗೆ ಸಾಲಮನ್ನಾ ಯೋಜನೆ ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕೆಂದು ಸೋಚನೆ ನೀಡಿದರು.
ಇದೇ ವೇಳೆ ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ ಮತ್ತು ಎಸ್.ಎನ್.ಮನ್ಮಥ ಮಾತನಾಡಿ, ಸಾಲಮನ್ನಾ ಪ್ರತಿಯೊಬ್ಬ ಫಲಾನುಭವಿಗಳಿಗೆ ಸಿಗುವಂತಾಗಬೇಕು. ಈ ದೃಷ್ಟಿಯಿಂದ ತಾ.ಪಂ.ನಲ್ಲಿ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸುವಂತೆ ಒತ್ತಾಯಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷ ಶುಭದಾ ಎಸ್.ರೈ, ಸ್ಥಾಯಿಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಸುಳ್ಯ ಸರ್ಕಲ್ ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್, ತಹಸೀಲ್ದಾರ್ ಕುಂಞÂಅಹಮ್ಮದ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *