Header Ads
Header Ads
Breaking News

ಸುಳ್ಯ ತೊಡಿಕಾನದ ಮುಪ್ಪಸೇರು, ಬೆಳೆ ನಾಶಗೈದ ಕಾಡಾನೆಗಳು

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು ರೈತರ ಕೃಷಿಗೆ ಹಾನಿ ಉಂಟಾಗಿದೆ.
ತೊಡಿಕಾನ ಕಾಡಿನ ಅರಣ್ಯದ ಅಂಚಿನ ಪ್ರದೇಶವಾದ ಮುಪ್ಪಸೇರು, ಚಳ್ಳಂಗಾಯ, ಗಾಳಿವನ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು ಸಿ. ಎನ್. ಬಾಲಕೃಷ್ಣ ಅವರ ತೋಟದ ತೆಂಗಿನ ಮರಗಳನ್ನು ಮುರಿದು ಹಾಕಿವೆ. ಅಲ್ಲದೆ ಅಡಿಕೆ, ಬಾಳೆ ಇತರ ಬೆಳೆಗಳಿಗೆ ಹಾನಿ ಮಾಡಿದೆ.
ಮುಪ್ಪಸೇರು ಭಾಗದಲ್ಲಿ ನೀರಿನ ಪೈಪ್ಗ್ಳನ್ನು ಎಳೆದು ತುಂಡು ಮಾಡಿ ಹಾಕಿದೆ. ಸುಡುಮದ್ದು ಸಿಡಿಸಿ ಈ ಭಾಗದ ಜನರು ಆನೆ ಓಡಿಸುವ ಪ್ರಯತ್ನ ಮಾಡುತ್ತಿದ್ದರೂ ಒಮ್ಮೆ ಇಲ್ಲಿಂದ ದೂರ ಸಾಗುವ ಆನೆಗಳು ಮತ್ತೆ ವಾಪಸು ಬರುತ್ತಿವೆ. ಈ ಪ್ರದೇಶಕ್ಕೆ ಮಳೆಗಾಲದಲ್ಲಿ ಪ್ರತಿ ವರ್ಷವೂ ಆನೆಗಳು ಬಂದು ತೊಂದರೆ ನೀಡುತ್ತಿರುವುದರಿಂದ ಶಾಶ್ವತ ಪರಿಹಾರಕ್ಕೆ ಇಲಾಖೆ ಪ್ರಯತ್ನಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply