Header Ads
Header Ads
Breaking News

ಸುಳ್ಯ ನಗರದಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಸುದ್ದಿಗೋಷ್ಠಿಯಲ್ಲಿ ವೆಂಕಪ್ಪ ಗೌಡ ಗಂಭೀರ ಆರೋಪ

ರಾಜ್ಯದ ಎಲ್ಲಾ ನಗರಗಳ ಒಳಚರಂಡಿ ಸಮರ್ಪಕವಾಗಿ ನಡೆದಿದ್ದರೂ ಸುಳ್ಯದಲ್ಲಿ ಸಮರ್ಪಕವಾಗಿ ಕಾರ್ಯಗತವಾಗಿಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಆರೋಪಿಸಿದರು.
ಅವರು ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಒಳಚರಂಡಿಯಲ್ಲಿ ಹರಿಯಬೇಕಾದ ತ್ಯಾಜ್ಯಗಳು ಹೊರಭಾಗ ಹರಿದು ಪಯಸ್ವಿನಿ ಒಡಲು ಸೇರುತ್ತಿದೆ. ಮ್ಯಾನ್‌ಹೋಲ್ ಕೂಡಾ ಸರಿಯಾಗಿಲ್ಲ. ಅಧಿಕ ಮಳೆಯಾದಾಗ ಎಂದಿನಂತೆ ಈ ಬಾರಿಯೂ ಮ್ಯಾನ್‌ಹೋಲ್ ತೆರೆಯಲಿದೆ. ನಗರದ ಒಳಚರಂಡಿ ಗುದ್ದಲಿಪೂಜೆ ೨೦೦೩ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿದ್ದರೂ ಒಟ್ಟಾರೆ ಒಂದೂವರೆ ವರ್ಷ ಮಾತ್ರ ಆಡಳಿವಿತ್ತು. ಆ ಬಳಿಕ ನಿರಂತರ ಬಿಜೆಪಿಯೇ ನಗರ ಪಂಚಾಯತ್‌ನ ಅಧಿಕಾರದಲ್ಲಿದ್ದು ಆ ಪಕ್ಷ ಏನು ಆಡಳಿತ ನೀಡಿದೆ ಎಂದು ಪ್ರಶ್ನಿಸಿದರು. ೧೪ನೇ ಹಣಕಾಸು ಯೋಜನೆಯಲ್ಲಿ ಸುಳ್ಯ ನಗರ ಪಂಚಾಯತ್‌ಗೆ ಬರುವ ಅನುದಾನ ಕೂಡಾ ಕಳೆದ ಬಾರಿಗಿಂತಲೂ ಕಡಿಮೆಯಾಗಿದೆ. ಪ್ರತೀ ವರ್ಷ ೧.೫೦ ಕೋಟಿ ರೂ. ಬರಬೇಕಾಗಿದ್ದು ಕಳೆದ ವರ್ಷ ಕಡಿತವಾಗಿ ೭೦ ಲಕ್ಷ ರೂ. ದೊರೆತಿದ್ದರೆ ಈ ಬಾರಿ ಅದಕ್ಕಿಂತಲೂ ಕಡಿಮೆಯಾಗಿ ಕೇವಲ ೬೦ ಲಕ್ಷ ರೂ. ಮಾತ್ರ ದೊರೆತಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಂಗಾಧರ ಪಿ.ಎಸ್., ನಾಯಕರುಗಳಾದ ಅಶೋಕ್ ಚೂಂತಾರು, ನಂದರಾಜ್ ಸಂಕೇಶ್ ಉಪಸ್ಥಿತರಿದ್ದರು.

Related posts

Leave a Reply