Header Ads
Header Ads
Breaking News

ಸುಳ್ಯ ನಗರದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದ ಕಾಮಗಾರಿಗಳು:  ದಿನೇಶ್ ಅಂಬೆಕಲ್ಲು ಆರೋಪ

ಸುಳ್ಯ ನಗರದಲ್ಲಿ ದಶಕಗಳಿಂದ ಹಲವು ಕಾಮಗಾರಿಗಳು ಅರ್ಧದಲ್ಲಿ ನೆನೆಗುದಿಗೆ ಬಿದ್ದಿದೆ. ನಗರದ ಈ ಯೋಜನೆಗಳ ವೈಫಲ್ಯಕ್ಕೆ ಸುಳ್ಯದ ಶಾಸಕರು ಮತ್ತು ನಗರ ಪಂಚಾಯತ್ ನೇರ ಹೊಣೆ. ಈ ಯೋಜನೆಗಳಿಗೆ ಬಿಡುಗಡೆಯಾದ ಸರಕಾರದ ಹಣ ಪೋಳು ಆಗಿದೆ ಎಂದು ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು ಆರೋಪಿಸಿದ್ದಾರೆ.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ “ಸುಳ್ಯ ನಗರದ ಅಭಿವೃದ್ಧಿಗೆ ಶಾಸಕ ಅಂಗಾರರು ಹಾಗೂ ಸಂಸದ ನಳಿನ್ ಕಟೀಲ್‌ರವರು 1 ರೂಪಾಯಿ ಕೂಡಾ ಅಭಿವೃದ್ಧಿಗೆ ನೀಡಿಲ್ಲ. ಅವರಿಗೆ ಸುಳ್ಯ ನಗರದ ಓಟು ಬೇಕಾಗಿಲ್ಲ“ ಎಂದು ಹೇಳಿದರು.
“60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀ ಡಾಂಗಣವನ್ನು ಶಾಸಕರಿಂದ ಪೂರ್ಣ ಗೊಳಿಸಲು ಆಗಿಲ್ಲ. ಸುಳ್ಯದ ಒಳಾಂಗಣ ಕ್ರೀಡಾಂಗಣ ನ.ಪಂ. ವ್ಯಾಪ್ತಿಗೆ ಸೇರಿದ್ದರೂ ಅದನ್ನು ಜನರ ಉಪಯೋಗಕ್ಕೆ ಬಿಟ್ಟು ಕೊಡುವಲ್ಲಿ ಶಾಸಕರು ಮುತುವರ್ಜಿ ವಹಿಸುತ್ತಿಲ್ಲ, ಒಳಚರಂಡಿ ವ್ಯವಸ್ಥೆಯನ್ನೂ ಸಮರ್ಪ ಕವಾಗಿ ಮಾಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ರಾಜ್ಯದ ೨೨೩ ವಿಧಾನ ಸಭಾ ಕ್ಷೇತ್ರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಸುಳ್ಯ ಕ್ಷೇತ್ರದಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆಯನ್ನು ಶಾಸಕರು ಕಲ್ಪಿಸಿಲ್ಲ ಎಂದು ಹೇಳಿದರು.

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ನಗರ ಪಂಚಾಯತ್ ಸದಸ್ಯರಾದ ಗೋಕುಲ್‌ದಾಸ್, ಕೆ.ಎಂ.ಮುಸ್ತಫ, ಶಿವಕುಮಾರ ಕಂದಡ್ಕ, ಯುತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ ಮುಖಂಡರಾದ ತೇಜಕುಮಾರ್ ಬಡ್ಡಡ್ಕ, ಮೊದಲಾದವರು ಉಪಸ್ಥಿತರಿದ್ದರು.