Header Ads
Header Ads
Breaking News

ಸುಳ್ಯ ನಗರದ ಕಸ ಸಮಸ್ಯೆ ಪರಿಹಾರಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ

ಸುಳ್ಯ ನಗರದ ಕಸ ವಿಲೇವಾರಿ ಸಮಸ್ಯೆ ನಗರಾಡಳಿತಕ್ಕೆ ದೊಡ್ಡ ಸಮಸ್ಯೆ ಆಗಿದ್ದು ನಗರ ಪಂಚಾಯತ್ ಎದುರು ಸಂಗ್ರಹಿಸಿದ ಕಸಗಳಿಗೆ ಮುಕ್ತಿ ನೀಡಲು ಕೂಡಲೇ ಬರ್ನಿಂಗ್ ಮೇಷಿನ್ ಖರೀದಿ ಮಾಡಿ ಸಂಗ್ರಹಿಸಿದ ಕಸಕ್ಕೆ ಒಂದು ವಾರದ ಒಳಗೆ ಮುಕ್ತಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಅಲ್ಲದೇ ಶಾಶ್ವತ ಪರಿಹಾರಕ್ಕೆ ಕೂಡಲೇ ಟೆಂಡರ್ ಕರಿಯಬೇಕು ಎಂದು ಶಾಸಕ ಎಸ್. ಅಂಗಾರ ನಗರ ಪಂಚಾಯತ್‌ಗೆ ಖಡಕ್ ಸೂಚನೆ ನೀಡಿದ್ದಾರೆ

ಸುಳ್ಯ ನಗರ ಪಂಚಾಯತ್‌ನ ಕಸ ವಿಲೇವಾರಿ ಸಮಸ್ಯೆ ನಗರಾಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು. ಸಮಸ್ಯೆಯ ಬಗ್ಗೆ ನಗರದ ಎಲ್ಲೇಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ತುರ್ತು ಸಭೆ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. sಸಭೆಯಲ್ಲಿ ಮಾತನಾಡಿದ ಶಾಸಕರು ಕಸ ಸಮಸ್ಯೆ ನಗರಾಡಳಿತಕ್ಕೆ ದೊಡ್ಡ ಸಮಸ್ಯೆಯಾಗಿದೆ. ನಗರದ ಕಸ ವಿಲೇವಾರಿ ಕೂಡಲೇ ಆಗಬೇಕು. ಅದಕ್ಕೆ ನಗರ ಪಂಚಾಯತ್ ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆ ಮನೆಯಿಂದ ಕಸ ಸಂಗ್ರಹ ನಾಳೆಯಿಂದಲೇ ಆರಂಭ ಮಾಡಬೇಕು. ನಗರ ಪಂಚಾಯತ್ ಎದುರು ಇರುವ ಕಸ ವಿಲೇವಾರಿಗೆ ಹೊಸ ಬರ್ನೀಂಗ್ ಮೆಶಿನ್ 5 ಲಕ್ಷ ವೆಚ್ಚದಲ್ಲಿ ಖರೀದಿಗೆ ಸೂಚನೆ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿಯವರ ಅನುಮತಿಗೆ ಮನವಿ ಮಾಡಿದರು. ವಾರದ ಒಳಗೆ ಕಸ ಸಮಸ್ಯೆಗೆ ಪರಿಹಾರಕ್ಕೆ ಸೂಚಿಸಿದ ಶಾಸಕರು ಶಾಶ್ವತ ಪರಿಹಾರಕ್ಕೆ ಈಗಾಗಲೇ ಕಾರ್ಯಪ್ರವೃತ್ತರಾಗಬೇಕು. ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ನ.ಪಂ ಸದಸ್ಯ ಎಂ. ವೆಂಕಪ್ಪ ಗೌಡ ಹಲವು ವರ್ಷದಿಂದ ನಗರದಲ್ಲಿ ಕಸ ಸಮಸ್ಯೆ ಇದೆ. ಕೆಲವು ತಿಂಗಳಿನಿAದ ಇದು ವಿಪರೀತವಾಗಿ ನಗರಾಡಳಿತಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ಒಂದು ವಾರದಿಂದ ನಗರದದ ವಾರ್ಡ್ಗಳಲ್ಲಿ ಕಸ ಸಂಗ್ರಹ ನಡೆಯುತ್ತಿಲ್ಲ. ಇಲ್ಲಿ ಅಧಿಕಾರಿಗಳು ಬಲಿಪಶು ಆಗುತ್ತಿದ್ದಾರೆ. ಇದಕ್ಕೆ ಶಾಶ್ವತ ಕ್ರಮಕ್ಕೆ ಉನ್ನತ ಮಟ್ಟದ ಜನಪ್ರತಿನಿಧಿಗಳ ನಿರ್ಲಕ್ಯ ಕಾರಣವಾಗಿದೆ. ವಾರ್ಡ್ಗಳಿಂದ ಕಸ ಸಂಗ್ರಹ ಮಾಡದಿದ್ದರೆ ನ. 7 ರಂದು ವಾರ್ಡ್ಗಳಲ್ಲಿ ಕಸ ಸಂಗ್ರಹಿಸಿಕೊAಡು ಬಂದು ನಗರ ಪಂಚಾಯತ್ ಎದುರು ಕಸ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಗರದ ಕಸ ಸಮಸ್ಯೆ ನಿವಾರಣೆಗೆ ರಾಜಕೀಯ ರಹಿತವಾಗಿ ಮಾತನಾಡಬೇಕು ಶಾಸಕರು ಮತ್ತು ಸಂಸದರು ಕಸ ವಿಲೇವಾರಿ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ವೆಂಕಪ್ಪ ಗೌಡ ಹೇಳಿದರು.

ನ.ಪಂ ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ನಗರ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಸಮಸ್ಯೆ ಉದ್ಭವವಾಗಿದೆ. ಕಲ್ಚರ್ಪೇಯಲ್ಲಿ ಕಸ ಹಾಕುತ್ತಿದ್ದದನ್ನು ಯಾಕೆ ನಿಲ್ಲಿಸಿದ್ದು ಅದು ನಗರ ಪಂಚಾಯತ್ ಸ್ಥಳ, 3 ಎಕರೆ ಪ್ರದೇಶ ನಗರ ಪಂಚಾಯತ್ ವ್ಯಾಪ್ತಿಗೆ ಆಗಿದೆ. ಅದೇ ಪ್ರದೇಶದಲ್ಲಿ ವೈಜ್ಷಾನಿಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

ನಗರದ ಕಸದ ಲಾರಿಗಳು ಎಲ್ಲಿ ಹೋದರೂ ಪ್ರತಿಭಟನೆ ನಡೆಯುತ್ತಿದೆ. ಸಂಗ್ರಹಿಸಿದ ಕಸ ಉರಿಸಲು ಕೂಡ ವಾಯು ಮಾಲಿನ್ಯ ಮಂಡಳಿಯವರ ಪರವಾನಿಗೆ ಅಗತ್ಯ ಇದೆ ಎಂದು ನ.ಪಂ ಮುಖ್ಯಾದಿಕಾರಿ ಮತ್ತಡಿ ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ನ.ಪಂ ಆಡಳಿತಾಧಿಕಾರಿ, ತಹಶೀಲ್ದಾರ್ ಕುಂಞ ಆಹಮ್ಮದ್ ಆಧುನಿಕವಾದ ಬರ್ನಿಂಗ್ ಮೆಶಿನ್ ಖರೀದಿಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಜಾಲ್ಸೂರಿನಲ್ಲಿ ಕಸ ವಿಲೇವಾರಿಗೆ ಈಗಾಗಲೇ 3 ಎಕರೆ ಜಾಗ ಗುರುತಿಸಲಾಗಿದೆ. ಜನಪ್ರತಿನಿಧಿಗಳ ಸಹಕಾರ ಇದ್ದರೆ ಕೂಡಲೇ ಮಾಡಿಕೊಡಲಾಗುವುದು ಎಂದರು. ಅಲ್ಲದೇ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಆಗಿದೆ. ನಗರದಲ್ಲಿ ಇನ್ನೊಮ್ಮೆ ಹೋಗಿ ಅಧಿಕಾರಿಗಳು ಧಾಳಿ ನಡೆಸಬೇಕು. ನಾಳೆಯಿಂದ ಎಲ್ಲಾ ವಾರ್ಡ್ಗಳಲ್ಲಿ ಕಸ ಸಂಗ್ರಹ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ನ.ಪಂ ಸದಸ್ಯರು, ಸಂಘಸAಸ್ಥೆಯ ಪದಾಧಿಕಾರಿಗಳು, ಮುಖ್ಯಾಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ವಿನೋದ್ ಲಸ್ರೋದೋ, ಕೆ.ಆರ್. ಮನಮೋಹನ್. ಡಿ.ಎಂ.ಶಾರೀಕ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *