Header Ads
Header Ads
Breaking News

ಸುಳ್ಯ ನಗರದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು

ಸುಳ್ಯ ನಗರದ ಸಮೀಪ ಪಯಸ್ವಿನಿ ಹೊಳೆಯ ಬದಿಯಲ್ಲಿ ಮೂರು ಮರಿ ಆನೆ ಸಹಿತ ಎಂಟು ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಘಟನೆ ಸುಳ್ಯ ನಗರದ ಸಮೀಪ ಭಸ್ಮಡ್ಕ ಪಯಸ್ವಿನಿ ಹೊಳೆಬದಿಯಲ್ಲಿ ಬೀಡುಬಿಟ್ಟಿದ್ದು, ಕಾಡಾನೆಗಳ ಹಿಂಡನ್ನು ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆಯೊಂದಿಗೆ ಊರವರು ಹರಸಾಹಸ ಪಡುತ್ತಿದ್ದಾರೆ.


ಸುಳ್ಯ ನಗರದ ಸಮೀಪದಲ್ಲಿ ಹರಿಯುವ ಪಯಸ್ವಿನಿ ಹೊಳೆಯ ಬದಿಯ ಭಸ್ಮಡ್ಕದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಮೂರು ಮರಿ ಆನೆ ಸೇರಿ ಎಂಟು ಕಾಡಾನೆಗಳು ಹೊಳೆ ಸಮೀಪದಲ್ಲಿ ಬೀಡುಬಿಟ್ಟಿದೆ. ನಾರ್ಕೊಡು ಕಡೆಯಿಂದ ಪಯಸ್ವಿನಿ ಹೊಳೆಗೆ ಬಂದ ಕಾಡಾನೆಗಳ ಹಿಂಡು ನೀರು ಕುಡಿದು ಮೇದಿನಡ್ಕದ ಮಾಡದಕಾನ ಭಾಗದಲ್ಲಿ ಬೀಡು ಬಿಟ್ಟಿದೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆಯ ಸುಳ್ಯ, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಹರಸಾಹಸ ಪಡುತ್ತಿದ್ದಾರೆ. ಆನೆಗಳನ್ನು ಓಡಿಸುವ ಯಾವ ಪ್ರಯಾತ್ನಗಳು ಕೂಡ ಕೈಹಿಡಿಯುತ್ತಿಲ್ಲ.
ಸಂಜೆಯ ವೇಳೆಗೆ ಸುಡು ಮದ್ದು ಸಿಡಿಸಿ ಮಂಡೆಕೋಲು ಕಡೆ ಆನೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಸುಳ್ಯ ತಾಲೂಕಿನ ಹಲವೆಡೆ ಕಾಡಾನೆಗಳ ದಾಳಿ, ಕೃಷಿ ಹಾನಿ ಸರ್ವೇ ಸಾಮಾನ್ಯವಾಗಿದೆ. ಮಂಡೆಕೋಲು, ಕೋಲ್ಚಾರು ಪ್ರದೇಶಗಳಲ್ಲಂತೂ ಇದು ನಿತ್ಯ ಬವಣೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಆನೆ ಹಾವಳಿ ನಡೆಯುತ್ತಿದೆ.

ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ, ಪಂಜ ರೇಂಜರ್ ಪ್ರವೀಣ್ ಶೆಟ್ಟಿ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಸೇರಿದಂತೆ ಇಪ್ಪತ್ತೈದಕ್ಕೂ ಅಧಿಕ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆನೆಗಳನ್ನು ಓಡಿಸಲು ಹರಸಾಹಸ ಮಾಡುತ್ತಿದ್ದಾರೆ.