Header Ads
Header Ads
Breaking News

ಸುಳ್ಯ ನಗರಪಂಚಾಯತ್‌ನ ಸಾಮಾನ್ಯ ಸಭೆ, ಮರಗಳ್ಳರ ವಿರುದ್ಧ ಸದಸ್ಯರು ಗರಂ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಅಂಬೆಟಡ್ಕ ಸಮೀಪ ಒಳಚರಂಡಿ ನಿರ್ಮಾಣ ವೇಳೆ ಕಡಿದ ಬೆಲೆಬಾಳುವ ಸಾಗುವಾನಿ ಮರಗಳು ನಿಗೂಡವಾಗಿ ನಾಪತ್ತೆಯಾದ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರಾಧಿಯಾಗಿ ನಗರ ಪಂಚಾಯತ್ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾಗಿರುವ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ವಿಷಯ ಪ್ರಸ್ತಾಪಿಸಿದರು. ಒಳಚರಂಡಿ ನಿರ್ಮಾಣ ವೇಳೆ ಅನಿವಾರ್ಯವಾಗಿ ಪಂಚಾಯತ್ ನೆಟ್ಟ ಮರಗಳನ್ನು ಕಡಿಯಲಾಗಿದೆ. ಆದರೆ ಕಾಸರಕನ ಮರ ಹೊರತುಪಡಿಸಿ ಉಳಿದ ಬೆಲೆಬಾಳುವ ಕಡಿದ ಮರಗಳನ್ನು ಯಾರು ಎಲ್ಲಿಗೆ ಸ್ಥಳಾಂತರಿಸಿದ್ದಾರೆ ಎಂಬುದಾಗಿ ಪ್ರಶ್ನಿಸಿದರು. ಈ ವೇಳೆ ಅಧ್ಯಕ್ಷೆ ಶೀಲಾವತಿ ಮಾಧವ ಅವರು ಧ್ವನಿಗೂಡಿಸಿ ಈ ಬಗ್ಗೆ ಅಧಿಕಾರಿಗಳೇ ಪರಸ್ಪರ ಮಾತನಾಡಿದರೆ ಹೊರತು ತನ್ನ ಗಮನಕ್ಕೆ ಬಂದಿಲ್ಲ. ಏನಾಗಿದೆ ಹಾಗೂ ಎಲ್ಲಿದೆ ಎಂಬುದೇ ತಿಳಿದಿಲ್ಲ ಎಂದರು. ವಾರ್ಡ್ ಸದಸ್ಯ ಕಿರಣ್ ಕುರುಂಜಿ ಕೂಡಾ ನಾಪತ್ತೆ ಬಗ್ಗೆ ತನಗೂ ಮಾಹಿತಿಯಿಲ್ಲ ಎಂದರು. ಈ ಸಂದರ್ಭ ಸದಸ್ಯರಾದ ಪ್ರೇಮಾ ಟೀಚರ್, ಫಯಾಸ್ ಉಮ್ಮರ್, ನಜೀರ್, ಸುನಿತಾ ಮೊಂತೆರೋ, ಗೋಕುಲ್‌ದಾಸ್, ಕೆ. ಎಂ. ಮುಸ್ತಫ, ಗೋಪಾಲ್ ನಡುಮುಟ್ಲು ಮತ್ತಿತರ ಸರ್ವಸದಸ್ಯರು ಹೆಗ್ಡೆಯವರನ್ನು ಬೆಂಬಲಿಸಿ ಮಾತನಾಡಿದರು. ಸದಸ್ಯ ಉಮ್ಮರ್ ಈ ಬಗ್ಗೆ ದೂರು ದಾಖಲಿಸುವಂತೆ ಸಲಹೆ ನೀಡಿದರು.
ಪ್ರಕಾಶ್ ಹೆಗ್ಡೆ ಮಾತನಾಡಿ, ಮರ ನಗರಸಭೆ ಸೊತ್ತು. ಅವುಗಳನ್ನು ನಗರಸಭೆ ಆವರಣಕ್ಕೆ ವಾಪಸ್ ತಂದಿಡಬೇಕು. ಕಾನೂನು ಪ್ರಕಾರ ಅವನ್ನು ಹರಾಜುಮಾಡಿ ಅದರ ಆದಾಯ ನಗರ ಪಂಚಾಯತ್‌ಗೆ ಬರುವಂತಾಗಬೇಕು. ವಾರದೊಳಗೆ ಮರವನ್ನು ನಗರ ಕಚೇರಿ ಆವರಣದಲ್ಲಿ ತಂದುಹಾಕಿಸುವಂತೆ ನಗರ ಮುಖ್ಯಾಧಿಕಾರಿಯನ್ನು ಸಭೆಯಲ್ಲಿ ಆಗ್ರಹಿಸಿದಾಗ ಅಧಿಕಾರಿ ಒಪ್ಪಿಗೆ ಸೂಚಿಸಿದರು.

Related posts

Leave a Reply