Header Ads
Header Ads
Breaking News

ಸುಳ್ಯ ನಗರ ಪಂಚಾಯತ್ ಎದುರು ಏಕಾಂಗಿ ಉಪವಾಸ ಸತ್ಯಾಗ್ರಹ. ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ನಿವೇಶನ ಎನ್‌ಒಸಿಗೆ ಆಗ್ರಹ

ಸುಳ್ಯದ ರಚನ್ ಸ್ವ ಅಭಿವೃದ್ದಿ ಅಸಹಾಯಕರ ಸೇವಾ ಸಂಘಕ್ಕೆ ನಿರಾಶ್ರತರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಸಂಘದ ಅಧ್ಯಕ್ಷ ಮಂಜುನಾಥ ಕುಕ್ಕುಜೆ ನಗರ ಪಂಚಾಯತ್ ಎದುರು ಏಕಾಂಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ಎಂಟು ವರ್ಷಗಳ ಹಿಂದೆ ಸುಳ್ಯದ ನಿರೀಕ್ಷಣಾ ಮಂದಿರದ ಬಳಿ ೪೬ ಸೆಂಟ್ಸ್ ಸ್ಥಳವನ್ನು ಗುರುತಿಸಿ ನಗರ ಪಂಚಾಯತ್‌ಗೆ ಕಡತ ನೀಡಲಾಗಿತ್ತು. ಆದರೆ ನ.ಪಂ ಈ ತನಕ ಅದಕ್ಕೆ ಸ್ಪಂದನೆ ನೀಡಿಲ್ಲ. ಅಲ್ಲದೇ ಅಲ್ಲಿ ಖಾಲಿ ಜಾಗ ಇಲ್ಲ ಎಂದು ಕಂದಾಯ ಇಲಾಖೆಗೆ ವರದಿ ನೀಡಿದೆ. ಇದರಿಂದ ಸಂಘಕ್ಕೆ ನಿವೇಶನ ಕಲ್ಪಿಸುವ, ನಿರಾಶ್ರಿತರಿಗೆ ಪುನರ್ವಸತಿ ಕೊಡುವ ಪ್ರಯತ್ನಕ್ಕೆ ತಡೆ ನೀಡಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲು ನಿರ್ಧರಿಸಿದ್ದರೂ ನಗರ ಪಂಚಾಯತ್ ನೀಡಿದ ವರದಿಯಿಂದ ಅನ್ಯಾಯವಾಗಿದೆ. ಸ್ಪಂದನೆ ಸಿಗುವ ತನಕ ಹೋರಾಟ ಮುಂದುವರಿಸುವುದಾಗಿ ಹೇಳಿದರು. ಪ್ರತಿಭಟನೆ ನಿರತ ಮಂಜುನಾಥ ಅವರ ಬಳಿ ಮುಖ್ಯಾಧಿಕಾರಿ ಚಂದ್ರಕುಮಾರ್ ಭೇಟಿ ಮಾಡಿ ಅಹವಾಲು ಸ್ವೀಕಾರ ಮಾಡಿದ್ದಾರೆ. ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೇ ನಗರ ಪಂಚಾಯತ್ ಸದಸ್ಯರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

Related posts

Leave a Reply