Header Ads
Header Ads
Breaking News

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಹಳೆ ಬಸ್ ನಿಲ್ದಾಣ ಬಳಿ ಕುರುಂಜಿ ಪ್ರತಿಮೆ ಸ್ಥಾಪನೆಗೆ ವಿರೋಧ ಸಾರ್ವಜನಿಕರಿಗೆ ತೊಂದರೆ ಆಗದ ಸೂಕ್ತ ಸ್ಥಳದಲ್ಲಿ ನಿರ್ಮಿಸಲು ಆಗ್ರಹ

ಸುಳ್ಯ ಹಳೆ ಬಸ್ ನಿಲ್ದಾಣದ ಬಳಿ ನಗರ ಪಂಚಾಯತ್ ಮತ್ತು ಸಾರ್ವಜನಿಕರಿಂದ ನಿರ್ಮಿಸಲ್ಪಡುವ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪ್ರತಿಮೆ ಸ್ಥಾಪನೆಗೆ ಪಯಸ್ವಿನಿ ಟ್ಯಾಕ್ಸಿ-ಚಾಲಕ-ಮಾಲಕರ ಸಂಘ ವಿರೋಧ ವ್ಯಕ್ತಪಡಿಸಿ ನಗರ ಪಂಚಾಯತ್‌ಗೆ ಮನವಿ ಮಾಡಿದ್ದು, ಸಾರ್ವಜನಿಕರಿಗೆ ಮತ್ತು ವ್ಯಾನ್, ಟ್ಯಾಕ್ಸಿ ಚಾಲಕ ಮಾಲಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ಸೂಕ್ತ ಸ್ಥಳದಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ವಿಪಕ್ಷ ಆಗ್ರಹಿಸಿದೆ.

ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಯಸ್ವಿನಿ ಟ್ಯಾಕ್ಸಿ- ಚಾಲಕ-ಮಾಲಕರ ಸಂಘ ನಗರ ಪಂಚಾಯತ್‌ಗೆ ಮಾಡಿದ್ದು, ಹಲವಾರು ವರ್ಷಗಳಿಂದ ನಗರ ಪಂಚಾಯತ್ ಸುಳ್ಯದ ಹಳೆಯ ಬಸ್ ನಿಲ್ದಾಣದ ಬಳಿ ವ್ಯಾನ್ ಮತ್ತು ಇತರ ವಾಹನಗಳಿಗೆ ದೈನಂದಿನ ಶುಲ್ಕ ವಸೂಲಿ ಮಾಡಿಕೊಳ್ಳುತ್ತಿತ್ತು. ಆದರೆ ಈಗ ನಮ್ಮ ವಾಹನ ನಿಲುಗಡೆಯ ಸ್ಥಳದಲ್ಲಿ ಕುರುಂಜಿ ಪ್ರತಿಮೆ ಸ್ಥಾಪನೆಯ ಕಾಮಗಾರಿ ಆರಂಭ ಅಗಿದೆ. ನಮ್ಮಿಂದ ಶುಲ್ಕವನ್ನು ಪಡೆದು ವಾಹನ ನಿಲುಗಡೆಗಾಗಿ ನ.ಪಂನಿಂದ ನಿಗದಿಪಡಿಸಿದ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧವಿದೆ.

ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ವಿಪಕ್ಷ ನಾಯಕ ಗೋಕುಲ್‌ದಾಸ್ ಮಾತನಾಡಿ ಕುರುಂಜಿಯವರ ಪ್ರತಿಮೆ ಕೊಳಚೆ ನೀರು ಮತ್ತು ಚರಂಡಿ ನೀರು ಹೋಗುವ ಸ್ಥಳದಲ್ಲಿ ಸ್ಥಾಪನೆ ಮಾಡಬಾರದು ಎಂದು ಹೇಳಿದರು. ಇದಕ್ಕೆ ಸದಸ್ಯ ಕೆ.ಂ. ಮುಸ್ತಫ ಕೂಡ ಧ್ವನಿಗೂಡಿಸಿ ನಗರ ಪಂಚಾಯತ್ ಯಾವುದೇ ಸರಿಯಾಗಿ ಯೋಚನೆ ಮಾಡದೇ ಕಾಮಗಾರಿ ಆರಂಭ ಮಾಡುತ್ತಿದೆ ಎಂದರು.ಸಭೆಯಲ್ಲಿ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಇಂಜಿನಿಯರ್ ಶಿವಕುಮಾರ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply