Header Ads
Header Ads
Breaking News

ಸುಳ್ಯ ಪ್ರಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ ಸಮಾರೋಪ

ಸುಳ್ಯ:ಬಹುತ್ವದ ಮುಖವನ್ನು ಯಾವಾಗ ಆರಾಧಿಸುತ್ತೇವೆಯೋ ಅಂತಹ ಸಂದರ್ಭದಲ್ಲಿ ಸಮಾಜ ಬಲಿಷ್ಠವಾಗುತ್ತದೆ. ಅಂತಹ ಸಮಾಜದಿಂದ ದೇಶವು ಬಲಿಷ್ಠಗೊಳ್ಳುತ್ತದೆ ಎಂದು ಸಾಹಿತಿ ವಿಶ್ರಾಂತ ಪ್ರಿನ್ಸಿಪಾಲ್ ಪ್ರೊ.ಕೆ.ಇ.ರಾಧಾಕೃಷ್ಣ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ, ಅರೆಷಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಮತ್ತು ಗೌಡರ ಯುವಸೇವಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಪ್ರಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿ ಮಾತನಾಡಿ ಭಾಷೆ ಬೆಳೆಯುವುದು ಮಡಿವಂತಿಕೆಯಿಂದಲ್ಲ, ಸಹೃದಯತೆಯಿಂದ. ಸಾಹಿತ್ಯ ವೆಂದರೆ ಸುಡುವ ಸಂಸ್ಕ್ರತಿಯಲ್ಲ, ನೆಡುವ, ಕೊಡುವ, ಕೂಡುವ ಸಂಸ್ಕೃತಿ ಎಂದು ರಾಧಾಕೃಷ್ಣ ಹೇಳಿದರು.

ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಭಾಷೆ ಉಳಿವಿಗೆ ಒತ್ತು ಕೊಡುವ ಅಗತ್ಯತೆ ಇದೆ. ನಾವು ನಮ್ಮ ತನವನ್ನು ಉಳಿಸಿ, ಬೇರೆಯವರಿಗೆ ಗೌರವ ಕೊಡುವ ಸಂಸ್ಕಾರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ಅಧ್ಯಕ್ಷತೆ ವಹಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಾಧಕರನ್ನು ಸನ್ಮಾನಿಸಿದರು. 
ವೇದಿಕೆಯಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಆರ್.ಗಂಗಾಧರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಎ.ವಿ.ತೀರ್ಥರಾಮ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ತೇಜಪ್ರಸಾದ ಅಮಚೂರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಅಕಾಡೆಮಿ ಸದಸ್ಯರಾದ ಬಾರಿಯಂಡ ಜೋಯಪ್ಪ, ದಿನೇಶ್ ಹಾಲೆಮಜಲು, ಯತೀಶ್ ಕುಮಾರ್ ಬಾನಡ್ಕ, ಕೆ.ಟಿ.ವಿಶ್ವನಾಥ, ಕಡ್ಲೇರ ತುಳಸಿಮೋಹನ್, ಎ.ಕೆ.ಹಿಮಕರ, ದೇವರಾಜ್ ಬೇಕಲ್, ಚಿದಾನಂದ ಬೈಲಾಡಿ, ಸುರೇಶ್ ಎಂ.ಹೆಚ್., ತಿರುಮಲೇಶ್ವರಿ ಮತ್ತಿತರರು ಉಪಸ್ಥಿತರಿದ್ದರು. 

ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *