Header Ads
Header Ads
Breaking News

ಸುಳ್ಯ ಬೆಳ್ಳಾರೆ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ

ಸುಳ್ಯ ತಾಲೂಕಿನ ಬೆಳ್ಳಾರೆ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ಲೈನ್ ಮೆನ್‌ಗಳ ಕೊರತೆ ಎದುರಾಗಿದ್ದು ಪರಿಣಾಮವಾಗಿ ವಿದ್ಯುತ್ ಬಳಕೆದಾರರು ಸಮಸ್ಯೆಗೊಳಾಗುತ್ತಿದ್ದಾರೆ. ಬೆಳ್ಳಾರೆ ಮೆಸ್ಕಾಂ ಶಾಖಾ ಕಛೇರಿ ವ್ಯಾಪ್ತಿಯಲ್ಲಿ ಈಗ ಅಂದಾಜು ೩೫೦ಕ್ಕಿಂತ ಹೆಚ್ಚು ಪರಿವರ್ತಕಗಳು ಇದೆ. ಬೆಳ್ಳಾರೆ ಶಾಖಾ ವ್ಯಾಪ್ತಿಯ ಅಂದಾಜು 250 ಚದರ ಕಿ.ಮೀ ನ್ನು ಒಳಗೊಡಿರುತ್ತದೆ. ಆದರೆ ಇಲ್ಲಿ ಈಗ ಕೇವಲ 6 ಜನ ಲೈನ್‌ಮ್ಯಾನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಕೈಕೊಟ್ಟರೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಲೈನ್‌ಮೆನ್‌ಗಳು ಇರುವುದಿಲ್ಲ. ಬೆಳ್ಳಾರೆ ಮೆಸ್ಕಾಂ ಶಾಖಾ ಕಛೇರಿಯ ವ್ಯಾಪ್ತಿಗೊಳಪಡುವ ಹೆಚ್ಚಿನ ಭಾಗಗಳು ಗ್ರಾಮೀಣ ಪ್ರದೇಶದಲ್ಲಿದೆ.

 

ವಿದ್ಯುತ್ ಲೈನ್‌ಗಳು ಹಾದು ಹೋಗುವ ಹೆಚ್ಚಿನ ಸ್ಥಳವು ಕಾಡುಮರಗಳಿಂದ ತುಂಬಿದ್ದು ಈ ಭಾಗದಲ್ಲಿ ಆಗಾಗ ವಿದ್ಯುತ್ ನಿಲುಗಡೆ ಆಗುತ್ತದೆ. ಇದರಿಂದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಬಹಳ ದಿವಸಗಳು ತಗಲುತ್ತದೆ. ಅಲ್ಲದೆ ಶಾಖಾ ಕಛೇರಿಯಲ್ಲಿನ ಲೈನ್‌ಮ್ಯಾನ್‌ಗಳ ಪೈಕಿ ಒಂದು ಲೈನಿನ ಲೈನ್‌ಮ್ಯಾನ್ ವಾರದ ರಜೆಯಲ್ಲಿ ಇರುವಾಗ ರಜೆಯಲ್ಲಿನ ಸಿಬ್ಬಂದಿಯ ವಿದ್ಯುತ್ ಲೈನಿನಲ್ಲಿ ದೋಷವುಂಟಾದಾಗ ಬದಲಿ ಲೈನ್ ಮೆನ್‌ಗಳನ್ನು ನೇಮಕ ಮಾಡಲಾಗುತ್ತಿಲ್ಲ. ಇದರಿಂದ ಸಮಸ್ಯೆ ಎದುರಾಗುತ್ತವೆ ಎಂದು ಸ್ಥಳೀಯರ ದೂರು. ಮತ್ತೊಂದು ಲೈನಿನ ಸಿಬ್ಬಂದಿಗಳಿಂದಲೇ ಲೈನಿನಲ್ಲಿರುವ ಅಡಚಣೆಯನ್ನು ಸರಿಪಡಿಸಲಾಗುತ್ತಿರುವುದರಿಂದ ಹೆಚ್ಚಿನ ಸಮಯ ತಗಲುತ್ತದೆ. ಅಲ್ಲದೆ ಭಾನುವಾರ ಹಾಗೂ ಇತರ ಸರಕಾರಿ ರಜಾದಿನಗಳಲ್ಲಿ ಬೆಳ್ಳಾರೆ ಮೆಸ್ಕಾಂ ಶಾಖಾ ಕಛೇರಿಗಳಲ್ಲಿ ಸಿಬ್ಬಂದಿಗಳು ಇರುವುದಿಲ್ಲ ಎಂಬ ಸ್ಥಳೀಯರ ಆರೋಪ ಇದ್ದು ಈ ದಿನಗಳಲ್ಲಿ ವಿದ್ಯುತ್ ಲೈನ್‌ನಲ್ಲಿ ದೋಷವುಂಟಾದಾಗ, ತುರ್ತು ನಿರ್ವಹಣೆ ಹಾಗೂ ಇತರ ಸಂದರ್ಭಗಳಲ್ಲಿ ಸರಿಪಡಿಸಲು ಬದಲಿಗೆ ಪ್ರತ್ಯೇಕ ಸಿಬ್ಬಂದಿ ಇಲ್ಲದೆ ಬಳಕೆದಾರರಿಗೆ ತೊಂದರೆ ಉಂಟಾಗುತ್ತದೆ.

Related posts

Leave a Reply