Header Ads
Header Ads
Breaking News

ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ:  ಡಾ| ರಘು ಹೇಳಿಕೆ

ಸುಳ್ಯದ ಬ್ಲಾಕ್ ಕಾಂಗ್ರೆಸ್ “ಎಸ್‌ಸಿ ಘಟಕದೊಳಗೆ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿದಿದೆ. ಇದ್ದ ಸಣ್ಣ ಸಮಸ್ಯೆಯನ್ನು ಬಗೆಹರಿಸಲಾಗಿದೆ“ ಎಂದು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಡಾ| ರಘು ಹೇಳಿದರು.

ಪತ್ರಿಕಾಗೋಷ್ಠಿಯ ಮಾತನಾಡಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕಗಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಎ.7ರಂದು ಪದಾಧಿಕಾರಿಗಳ ಪಟ್ಟಿಯನ್ನು ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಲಕ್ಷ್ಮೀ ಸುಬ್ರಹ್ಮಣ್ಯ ಘೋಷಣೆ ಮಾಡಿದರು.
“ನಮ್ಮ ಬೇಡಿಕೆಗಳು ಈಡೇರಿಲ್ಲ. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಡಾ| ರಘುರವರು ಮತ್ತು ದಿನೇಶ್ ಅಂಬೆಕಲ್ಲುರವರು ನಮ್ಮ ಜತೆ ಮಾತನಾಡಿದ್ದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ನಾವು ರಘುರನ್ನು ಬೆಂಬಲಿಸುತ್ತೇವೆ. ಈಗಾಗಲೇ ಫೀಲ್ಡ್ ಕೂಡಾ ಮಾಡುತ್ತಿzವೆ. ಆದರೆ ನಮ್ಮಲ್ಲಿ ಗೊಂದಲಗಳಿರಲಿಲ್ಲ. ಜಿಲ್ಲಾಧ್ಯಕ್ಷರು ಇಲ್ಲಿಗೆ ಬಂದುದರಿಂದ ಸ್ವಲ್ಪ ಗೊಂದಲ ಏರ್ಪಟ್ಟಿತೆ ಹೊರತು ಬೇರೇನೂ ಆಗಿಲ್ಲ“ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಮಾಜಿ ಅಧ್ಯಕ್ಷ ಅಚ್ಚುತ ಮಲ್ಕಜೆ ಉತ್ತರಿಸಿದರು.

ವರದಿ: ಪದ್ಮನಾಭ ಸುಳ್ಯ

Related posts