Header Ads
Header Ads
Header Ads
Breaking News

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಸಂಸದ ನಳಿನ್ ವರ್ತನೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಆಕ್ಷೇಪ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಜಯಪ್ರಕಾಶ್ ರೈ

 

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯು ಯುವಜನ ಸಂಯುಕ್ತ ಸಭಾಭವನದಲ್ಲಿ ಅಧ್ಯಕ್ಷ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಯಪ್ರಕಾಶ್ ರೈ ಯವರು , ಜಾತ್ಯಾತೀತ ನಿಲುವಿನ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಭೆ ಖಂಡಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಸಮಾಜದಲ್ಲಿ ವ್ಯವಸ್ಥೆಯ ವಿರುದ್ಧ ಮತ್ತು ಕೋಮುವಾದದ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳನ್ನು ದಮನಿಸುವ ಪ್ರವೃತ್ತಿ ಈಗ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಅವರು ಹೇಳಿದರು. ಪರಿಸರ ಸೂಕ್ಷ್ಮ ವಲಯಕ್ಕೆ ತಾಲೂಕಿನ ಎರಡು ಗ್ರಾಮಗಳು ಸೇರಿರುವ ಹಿನ್ನಲೆಯಲ್ಲಿ ಆ ಭಾಗದ ಜನರ ಭಾವನೆಗಳಿಗೆ ಸಹಮತ ವ್ಯಕ್ತಪಡಿಸಿ, ಅವರ ಹೋರಾಟದಲ್ಲಿ ಭಾಗಿಯಾಗುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮಂಗಳೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ರ್‍ಯಾಲಿ ವೇಳೆ ಪೊಲೀಸ್ ಅಧಿಕಾರಿಗಳೊಂದಿಗೆ ತನ್ನ ಸ್ಥಾನದ ಘನತೆ ಮರೆತು ವರ್ತಿಸಿದ ನಳಿನ್ ಕುಮಾರ್ ಕಟೀಲ್ ರವರ ವರ್ತನೆಯನ್ನು ಸಭೆ ಖಂಡಿಸಿದೆ. ಮರಳು ಸಮಸ್ಯೆ ಕುರಿತಂತೆ ಚರ್ಚಿಸಿ, ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿಲಾಗಿದೆ. ಅಲ್ಲದೆ ಸಮರ್ಪಕ ಮರಳು ಸಿಗುವಂತೆ ಸಭೆ ಒತ್ತಾಯಿಸಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳನ್ನು ಪ್ರಕಟಿಸಲಾಗಿದೆ. ಮುಂಬರುವ ಚುನಾವಣೆಗೆ ಕಾಂಗ್ರೆಸ್ ೫ ಹಂತಗಳಲ್ಲಿ ಸನ್ನದ್ಧವಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಜ್ಯ ಸರಕಾರದ ಸಾಧನೆಯನ್ನು ತಿಳಿಸಲಿದ್ದಾರೆ ಎಂದು ಜಯಪ್ರಕಾಶ್ ರೈ ಹೇಳಿದರು.

ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ಶ್ರೀಮತಿ ವಹಿದಾ ಇಸ್ಮಾಯಿಲ್, ಸದಸ್ಯರುಗಳಾಗಿ ಎಂ. ವೆಂಕಪ್ಪ ಗೌಡ, ಡಾ. ಬಿ. ರಘು, ವಕ್ಫ್ ಪರಿಷತ್ ನಿರ್ಧೇಶಕರಾಗಿ ಎಸ್ ಸಂಶುದ್ದೀನ್ ಅವರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ಭರತ್ ಮುಂಡೋಡಿ, ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ಸೋಮಶೇಖರ ಕೊಯಿಂಗಾಜೆ, ಚಂದ್ರಶೇಖರ ಕಾಮತ್, ಬೀರಾಮೊದೀನ್, ಶ್ರೀಮತಿ ಜೂಲಿಯಾನ ಕ್ರಾಸ್ತ, ದೇವಪ್ಪ ನಾಯ್ಕ್. ಜಿ.ಪಂ. ವಾರು ಸಂಘಟನಾ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಅರಂತೋಡು ಕ್ಷೇತ್ರಕ್ಕೆ ಸೋಮಶೇಖರ ಕೊಯಿಂಗಾಜೆ, ಜಾಲ್ಸೂರು ಕ್ಷೇತ್ರಕ್ಕೆ ಸದಾನಂದ ಮಾವಜಿ, ಬೆಳ್ಳಾರೆ ಕ್ಷೇತ್ರಕ್ಕೆ ಚಂದ್ರಶೇಖರ ಕಾಮತ್, ಗುತ್ತಿಗಾರು ಕ್ಷೇತ್ರಕ್ಕೆ ಪಿ.ಸಿ. ಜಯರಾಮ್.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಹರಿ ಕುಕ್ಕುಡೇಲು, ಧರ್ಮಪಾಲ ಕೊಯಿಂಗಾಜೆ, ಅಬ್ದುಲ್ ಗಫೂರ್, ಅಶೋಕ್ ನೆಕ್ರಾಜೆ, ಖಜಾಂಜಿಯಾಗಿ ಕೆ.ಎಂ. ಮುಸ್ತಫಾ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಕೆ. ಹಮೀದ್, ಸಚಿನ್‌ರಾಜ್ ಶೆಟ್ಟಿ, ಲಕ್ಷ್ಮಣ ಶೆಣೈ, ಆದಂ ಸಾಹೇಬ್, ಚಂದ್ರಶೇಖರ ಬಳ್ಪ, ಮೋಹನ್‌ದಾಸ್ ಕೂಟಾಜೆ, ದಿನೇಶ್ ಸರಸ್ವತಿ ಮಹಲ್, ಸನತ್ ಮುಳುಗಾಡು, ಮಹಮ್ಮದ್ ಫವಾಜ್, ಓವಿನ್ ಪಿಂಟೋ ಬೆಳ್ಳಾರೆ, ಮಾಧ್ಯಮ ಸಂಯೋಜಕರಾಗಿ ಭವಾನಿಶಂಕರ ಕಲ್ಮಡ್ಕ, ಯು.ಕೆ ಮಹಮ್ಮದ್ ಹನೀಫ್ ಬೆಳ್ಳಾರೆ, ವಕ್ತಾರರಾಗಿ ನಂದರಾಜ್ ಸಂಕೇಶ, ಶಿವರಾಮ ರೈ ಸುಬ್ರಹ್ಮಣ್ಯ. ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಗೀತಾ ಕೋಲ್ಚಾರು, ಯುವ ಘಟಕದ ಅಧ್ಯಕ್ಷರಾಗಿ ಸಿದ್ದೀಕ್ ಕೊಕ್ಕೊ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾಗಿ ಮುತ್ತಪ್ಪ ಪೂಜಾರಿ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಅಚ್ಚುತ ಮಲ್ಕಜೆ, ಪರಿಶಿಷ್ಟ ವರ್ಗದ ಅಧ್ಯಕ್ಷರಾಗಿ ಆನಂದ ಕೆಂಬಾರೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗು ಅಬ್ದುಲ್ ಮಜೀದ್ ಜಾಲ್ಸೂರು, ಇಂಟೆಕ್ ಅಧ್ಯಕ್ಷರಾಗಿ ಉದಯ್‌ಕುಮಾರ್ ಕುಕ್ಕುಡೇಲು, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಚಂದ್ರಲಿಂಗಂ, ಕಿಸನ್ ಘಟಕದ ಅಧ್ಯಕ್ಷರಾಗಿ ಅಶೋಕ್ ಚೂಂತಾರು, ಎನ್.ಎಸ್.ಯು.ಐ. ಅಧ್ಯಕ್ಷರಾಗಿ ಕೆ.ಕೆ. ಹರಿಪ್ರಸಾದ್. ತಾ.ಪಂ. ವಾರು ಸಂಘಟನಾ ಉಸ್ತುವಾರಿಗಳಾಗಿ ಗುತ್ತಿಗಾರಿಗೆ ಪರಶುರಾಮ ಚಿಲ್ತಡ್ಕ, ಸುಬ್ರಹ್ಮಣ್ಯಕ್ಕೆ ಅಶೋಕ್ ನೆಕ್ರಾಜೆ, ಮಡಪ್ಪಾಡಿಗೆ ಸತೀಶ್ ಕೂಜೂಗೋಡು, ಆಲೆಟ್ಟಿಗೆ ಸತ್ಯಕುಮಾರ್ ಆಡಿಂಜ, ಅರಂತೋಡಿಗೆ ಮಹಮ್ಮದ್ ಕುಂಞಿ ಗೂನಡ್ಕ, ನೆಲ್ಲೂರು ಕೆಮ್ರಾಜೆಗೆ ಪಿ.ಎಸ್ ಗಂಗಾದರ್, ಜಾಲ್ಸೂರಿಗೆ ತೀರ್ಥರಾಮ ಜಾಲ್ಸೂರು, ಅಜ್ಜಾವರಕ್ಕೆ ಪ್ರಸಾದ್ ರೈ ಮೇನಾಲ, ಐವರ್ನಾಡಿಗೆ ಅಶೋಕ್ ಚೂಂತಾರು, ಬೆಳ್ಳಾರೆಗೆ ಅನಿಲ್ ರೈ, ಬಾಳಿಲಕ್ಕೆ ವಿಶ್ವನಾಥ ರೈ ಕಳಂಜ, ಪಂಜಕ್ಕೆ ಅಬ್ದುಲ್ ಗಫೂರ್, ಎಣ್ಮೂರಿಗೆ ರಮೇಶ್ ಕೋಟೆ, ಸುಳ್ಯ ನಗರಕ್ಕೆ ಸಂಶುದ್ದೀನ್.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ಗೌಡ ನೆಕ್ರಾಪ್ಪಾಡಿ, ಸುಧೀರ್ ರೈ ಮೇನಾಲ, ಮಹಮ್ಮದ್ ಕುಂಞಿ ಗೂನಡ್ಕ, ಎನ್.ಜಿ.ಲೋಕನಾಥ ರೈ, ಮಾಧವ ಗೌಡ ಬೆಳ್ಳಾರೆ, ನಾರಾಯಣ ನಾಯ್ಕ್, ರಮೇಶ್ ಕೋಟೆ, ಸತೀಶ್ ಕೂಜುಗೋಡು, ಜನಾರ್ದನ, ಲೀಲಾ ಮನಮೋಹನ್, ನಾರಾಯಣ ಜಟ್ಟಿಪಳ್ಳ, ಹಸೈನಾರ್ ಹಾಜಿ ಗೋರಡ್ಕ.

ವರದಿ: ಪದ್ಮನಾಭ ಸುಳ್ಯ

Related posts

Leave a Reply