Header Ads
Header Ads
Header Ads
Breaking News

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿಜಯಂತಿ ಆಚರಣೆ ಅಧಿಕಾರ ಮತ್ತು ಹಣದ ಆಸೆಯಿಂದ ಗಾಂಧಿ ತತ್ವಕ್ಕೆ ಹಿನ್ನಡೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಹೇಳಿಕೆ

ಮಹಾತ್ಮ ಗಾಂಧಿಯ ತ್ಯಾಗ, ಸರಳ ಜೀವನ, ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕಿದವರು. ನಾವು ಗಾಂಧಿ ಆಗಲು ಸಾಧ್ಯ ಆಗದಿದ್ದರೂ ಅವರ ತತ್ವಗಳನ್ನು ಪಾಲಿಸಬೇಕು. ಅಧಿಕಾರದ ಆಸೆ, ಹಣದ ಆಸೆಗಳಿಂದ ಇವತ್ತು ಗಾಂಧಿ ತತ್ವವನ್ನು ಮರೆಯುತ್ತಿದ್ದೇವೆ. ಈ ಎಲ್ಲಾ ಕಾರಣಗಳಿಂದ ಗಾಂಧಿ ಹುಟ್ಟಿದ ದೇಶದಲ್ಲಿ ಗಾಂಧಿ ತತ್ವಗಳಿಗೆ ಹಿನ್ನೆಡೆ ಆಗುತ್ತಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಹೇಳಿದರು.

ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ವಕ್ತಾರ ನಂದರಾಜ್ ಸಂಕೇಶ, ಗೋಕುಲ್ ದಾಸ್, ಜೂಲಿಯಾನ ಕ್ರಾಸ್ತಾ, ಶ್ರೀಹರಿ ಕುಕ್ಕುಡೇಲು, ಧರ್ಮಪಾಲ ಕೊಯಿಂಗಾಜೆ, ದಿನೇಶ್ ಅಂಬೆಕಲ್ಲು, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಪ್ರವೀಣಾ ರೈ ಮರುವಂಜ, ಪ್ರಶಾಂತ್ ರೈ ಮರುವಂಜ ಶಶಿಕಲಾ ನೀರಬಿದಿರೆ, ಸುಜಯಕೃಷ್ಣ, ವಿಶ್ವನಾಥ ಅಲೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply