Header Ads
Header Ads
Breaking News

ಸುಳ್ಯ ರಂಗಮನೆಯಲ್ಲಿ ಯಕ್ಷ ಸಂಭ್ರಮ-ಸಾಹಿತ್ಯ ಸಂಭ್ರಮ ಸಮಾರೋಪ ಕಲೆಗಳ ಉಳಿವಿಗೆ ಮಕ್ಕಳಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ

ಕಲಾಪ್ರತಿಭೆಗಳಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ ವಿದ್ದು, ಮಕ್ಕಳ ಮೂಲಕ ಪ್ರತಿಭೆಗಳನ್ನು ಹೊರಸೂಸುವ ಕೆಲಸಗಳು ಆದಾಗ ನಮ್ಮಿಂದ ದೂರವಾಗುತ್ತಿರುವ ಕಲೆಗಳ ಉಳಿಸುವ ಕೆಲಸ ಆಗುತ್ತಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಸುಳ್ಯದ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳಿಂದ ಯಕ್ಷಸಂಭ್ರಮ-ಯುವ ಯಕ್ಷಗಾನ ಕಲಾವಿದರಿಗೆ ಸನ್ಮಾನ ಸಮಾರಂಭ ಮತ್ತು ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಇದರ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆದ ಸಾಹಿತ್ಯ ಸಂಭ್ರಮ ಸಮಾರೋಪ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ವಿಚಾರಗಳನ್ನು ನಮ್ಮ ಮಕ್ಕಳಿಂದ ಆರಂಭವಾಗಬೇಕಿದೆ. ಕಲೆಗಳ ಉಳಿವಿಗೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಹರಪ್ರಸಾದ್ ವಹಿಸಿದರು. ಈ ಸಂದರ್ಭದಲ್ಲಿ ಯುವ ಯಕ್ಷಗಾನ ಕಲಾವಿದರಾದ ಶ್ರೀಮತಿ ಭವ್ಯಶ್ರೀ ಮಂಡೆಕೋಲು, ದಿವಾಕರ ರೈ ಸಂಪಾಜೆ, ಜಯಾನಂದ ಸಂಪಾಜೆ ಇವರನ್ನು ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ಸನ್ಮಾನಿಸಿದರು.

ವೇದಿಕೆಯಲ್ಲಿ ಸುಜನಾ ಸುಳ್ಯ, ತಾಲೂಕು ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು, ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ, ತೇಜಸ್ವಿ ಕಡಪಳ, ಕೋಶಾಧಿಕಾರಿ ಯಸ್.ದಯಾನಂದ ಆಳ್ವ, ನಿರ್ದೇಶಕಿ ಗಿರಿಜಾ ಎಂ.ವಿ ಇದ್ದರು. ಡಾ|ಸುಂದರ ಕೇನಾಜೆ, ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಕೇಶವ ಸಿ.ಎ ವಂದಿಸಿದರು. ಬಳಿಕ ಸಂಜೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷ ಗುರುಗಳಾದ ಲಕ್ಷ್ಮೀಶ ರೈ ಕಳಂಜ ಇವರ ನಿರ್ದೇಶನದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ಭಾಗವತರಾಗಿ ರಾಮಚಂದ್ರ ಅರ್ಬಿತ್ತಾಯ, ಹಿಮ್ಮೇಳದಲ್ಲಿ ಕುಮಾರ ಸುಬ್ರಹ್ಮಣ್ಯ ಹಾಗೂ ಬಾಲಕೃಷ್ಣ ಬೊಮ್ಮಾರು ಭಾಗವಹಿಸಿದರು.

ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಲಕ್ಷ್ಮೀಶ ರೈ ರೆಂಜಾಳ ಇವರು ಸಂಯೋಜಿಸಿದ ಯಕ್ಷಗಾನ ಮಾಯಾ ತಿಲೋತ್ತಮೆ ಪ್ರದರ್ಶನಗೊಂಡಿತು. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮತ್ತು ವಿನಯ ಆಚಾರ್ಯ ಕಡಬ, ಕಲಾವಿದರಾಗಿ ಅಂಬಾಪ್ರಸಾದ್ ಪಾತಾಳ, ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಜಯಾನಂದ ಸಂಪಾಜೆ ಹಾಗೂ ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದರು