Header Ads
Breaking News

ಸುಳ್ಯ ರಂಗಮನೆಯಲ್ಲಿ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರ ಆರಂಭ

ಒಂದು ಭಾಷೆಯ ವಿಸ್ತಾರವಾಗಬೇಕಾದರೆ, ಭಾಷೆಯ ಬೆಳವಣಿಗೆ ಆಗಬೇಕಾದರೆ ಮತ್ತು ಪ್ರಪಂಚಕ್ಕೆ ನಮ್ಮ ಭಾಷೆಯನ್ನು ವಿಸ್ತಾರಮಾಡಬೇಕು. ರಂಗಭೂಮಿಯ ಪ್ರಬಲ ಮತ್ತು ಪ್ರಭಾವಿ ಮಾಧ್ಯಮವಾದ ನಾಟಕವನ್ನು ಅರೆಭಾಷೆಯಲ್ಲಿ ನಡೆಸುತ್ತಿರುವುದು ಭಾಷೆ ವಿಸ್ತಾರದ ಕೆಲಸ ಎಂದು ಹಿರಿಯ ರಂಗಕರ್ಮಿ ತುಕಾರಾಮ್ ಏನೆಕಲ್ಲು ಹೇಳಿದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯದ ರಂಗಮನೆ ಸಾಂಸ್ಕøತಿಕ ಕಲಾಕೇಂದ್ರದಲ್ಲಿ ಆರಂಭವಾದ ಒಂದು ತಿಂಗಳ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಮಾತನಾಡಿ ರಂಗ ತರಬೇತಿಗಳನ್ನು ನೀಡುವ ಮೂಲಕ ಕಳೆದ ಮೂರು ಅವಧಿಗಳಲ್ಲಿಅಕಾಡೆಮಿಯ ಮೇಲೆ ಇದ್ದ ಗ್ರಹಣ ವಿಮೋಚನೆಯಾಗಿದೆ. ಒಂದು ಭಾಷೆ ಎಲ್ಲಾರ ಭಾಷೆ ಆಗಬೇಕು. ಅದು ಒಂದು ವರ್ಗ, ಜಾತಿಗೆ ಸೀಮಿತವಾದತೆ ಭಾಷೆ ಬೆಳವಣಿಗೆ ಆಗುವುದಿಲ್ಲ. ನಾಟಕಗಳು ಮುಖವಾಡವನ್ನು ಕಳಚುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌಡರ ಯುವಸೇವಾ ಸಂಘದ ಅದ್ಯಕ್ಷ ಮೋಹನ್‍ರಾಂ ಸುಳ್ಳಿ, ಶಿಬಿರ ನಿರ್ದೇಶಕ ಜೀವನ್ ರಾಂ ಸುಳ್ಯ, ರಂಗಕರ್ಮಿ ಎಂ.ಎಸ್. ಜಯಪ್ರಕಾಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *