Header Ads
Header Ads
Breaking News

ಸುಳ್ಯ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ; ಅ.15ರಂದು ಸಮಾವೇಶ

ಶಬರಿಮಲೆ ಅಯ್ಯಪ್ಪಸ್ವಾಮಿ ಕ್ಷೇತ್ರಕ್ಕೆ ಎಲ್ಲಾ ಮಹಿಳೆಯರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಮತ್ತು ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ ಕೇರಳ ಸರಕಾರದ ವಿರುದ್ದ ಸುಳ್ಯದ ಅಯ್ಯಪ್ಪ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಹೋರಾಟ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಎಲ್ಲಾ ಮಹಿಳೆಯರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುವ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀಮಾರ್ಣ ಕೈಗೊಳ್ಳಲಾಯಿತು. ಸಭೆಯಲ್ಲಿ ನೂತನವಾಗಿ ಅಯ್ಯಪ್ಪ ಸ್ವಾಮಿ ಭಕ್ತವೃಂದ ಹೋರಾಟ ಸಮಿತಿಯನ್ನು ರಚನೆ ಮಾಡಲಾಗಿದ್ದು. ಇದರ ಮೂಲಕ ಹೋರಾಟ ನಡೆಯಲಿದೆ. ಅ. 15 ರಂದು ಸುಳ್ಯದ ಜ್ಯೋತಿ ವೃತ್ತದಿಂದ ಬೃಹತ್ ಭಕ್ತವೃಂದರ ಮೂಲಕ ಮೆರವಣಿಗೆಯ ಮೂಲಕ ಸಾಗಿ ಬಹಿರಂಗ ಸಭೆಯ ಬಳಿಕ ಮನವಿ ನೀಡಲು ಉದ್ದೇಶಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಪಿ.ಬಿ ಸುಧಾಕರ್ ರೈ, ಕಾರ್ಯದರ್ಶಿಯಾಗಿ ಮಹೇಶ್ ಕುಮಾರ್ ಮೇನಾಲ, ಸಂಚಾಲಕರಾಗಿ ಸುರೇಶ್ ಕಣೆಮರಡ್ಕ ತಾಲೂಕಿನ ವಿವಿಧ ಕಡೆಯ 25 ಮಂದಿ ಗುರುಸ್ವಾಮಿಗಳನ್ನು ಉಪಾಧ್ಯಕ್ಷರುಗಳಾಗಿ ಮತ್ತು ಕಾನೂನು ಸಲಹೆಗಾರರಾಗಿ ರಾಮಕೃಷ್ಣ ಅಮೈ ಅವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಪಿ.ಬಿ. ಸುಧಾಕರ್ ರೈ, ಶಿವಪ್ರಕಾಶ್ ಅಡ್ಪಂಗಾಯ, ಮಹೇಶ್ ಕುಮಾರ್ ಮೇನಾಲ, ಕೆಂಚಪ್ಪ ಗುರುಸ್ವಾಮಿ, ಪದ್ಮನಾಭ ಗುರುಸ್ವಾಮಿ, ಸಂತೋಷ್ ಗುರುಸ್ವಾಮಿ ಉಪಸ್ಥಿತರಿದ್ದರು.

Related posts

Leave a Reply