Header Ads
Header Ads
Breaking News

ಸುಳ್ಯ ಸರಕಾರಿ ಆಸ್ಪತ್ರೆಗೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ

ಸುಳ್ಯ ಸರಕಾರಿ ಆಸ್ಪತ್ರೆ 100 ಬೆಡ್ ಸಾಮರ್ಥ್ಯವನ್ನು ಹೊಂದಿ ಮೇಲ್ಲರ್ಜೇಗೆ ಏರಿದೆ. ಆದರೆ ಕಳೆದ 11 ವರ್ಷಗಳಿಂದ ತಾಲೂಕು ಆಸ್ಪತ್ರೆ ಜಿಲ್ಲಾ ಪಂಚಾಯತ್ ಸಮಿತಿ ಆಧೀನದಲ್ಲೇ ಇದೆ. ಕೂಡಲೇ ಸರಕಾರಕ್ಕೆ ಹಸ್ತಾಂತರವಾಗುವ ಕೆಲಸ ಆಗಬೇಕು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಭಾನುಮತಿ ಮನವಿ ಮಾಡಿದ್ದಾರೆ. ಸುಳ್ಯ ಸರಕಾರಿ ಆಸ್ಪತ್ರೆಗೆ ರಾಜ್ಯ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ ವೇಳೆ ಮನವಿ ಮಾಡಿದ ಅವರು ಈಗಾಗಲೇ ಆಸ್ಪತ್ರೆ ಮೇಲ್ದರ್ಜೆಗೇರಿ 11 ವರ್ಷ ಆಗಿದೆ. ಜಿ.ಪಂ.ಸಮಿತಿ ವತಿಯಿಂದ ಸರಕಾರಕ್ಕೆ ಹಸ್ತಾಂತರವಾಗಬೇಕಿದೆ. ಸರಕಾರಕ್ಕೆ ಹಸ್ತಾಂತರವಾದರೆ ಇಲ್ಲಿ ಇರುವ ಸಿಬ್ಬಂದಿಗಳ ಕೊರತೆ ನೀಗುತ್ತದೆ.

ಜತೆಗೆ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯವೂ ಹೆಚ್ಚುತ್ತದೆ ಎಂದು ಹೇಳಿ ಕೂಡಲೇ ಸರಕಾರಕ್ಕೆ ಹಸ್ತಾಂತರಿಸುವಂತೆ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದರು.ಬಳಿಕ ಆಸ್ಪತ್ರೆಗಳ ವಾರ್ಡ್‌ಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ವೈದ್ಯಾಧಿಕಾರಿಯವರು ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಹುದ್ದೆ ಖಾಲಿ ಇದ್ದ ಬಗ್ಗೆ, ಸಿಬ್ಬಂದಿಗಳ ಕೊರತೆ ಬಗ್ಗೆ ಪರಿಷತ್ ಸದಸ್ಯರ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಕರುಣಾಕರ, ಡಾ.ಹಿಮಕರ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಶುಭದಾ ಎಸ್.ರೈ, ನ.ಪಂ.ಅಧ್ಯಕ್ಷೆ ಶೀಲಾವತಿ ಮಾದವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಬಿಜೆಪಿ ಮುಖಂಡರಾದ ಪ್ರಕಾಶ್ ಹೆಗ್ಡೆ, ಸೋಮನಾಥ ಪೂಜಾರಿ, ಭಾಗೀರಥಿ ಮುರುಳ್ಯ ಮತ್ತಿತರು ಇದ್ದರು.

Related posts

Leave a Reply