Header Ads
Header Ads
Breaking News

ಸುಳ್ಯದಲ್ಲಿ ಕೆವಿಜಿ ಸಮೂಹ ಸಂಸ್ಥೆಯಿಂದ ಸ್ಥಾಪಕರ ದಿನಾಚರಣೆ.

ಸುಳ್ಯದ ಅಮರ ಶಿಲ್ಪಿ ಕೊಡುಗೆ ದಾನಿ, ಶಿಕ್ಷಣ ಬ್ರಹ್ಮ, ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರವರ ಹುಟ್ಟುಹಬ್ಬದ ನೆನಪಿಗಾಗಿ ಕೆವಿಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಉದ್ಯೋಗಿಗಳು ಸೇರಿ ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯ, ಶಿಕ್ಷಣ ತಜ್ಞ, ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ, ಪದ್ಮಭೂಷಣ ಡಾ. ಬಿ.ಎಂ. ಹೆಗ್ಡೆಯವರು ಸುಳ್ಯದ ಅಮರ ಶಿಲ್ಪಿ ಕೊಡುಗೆದಾನಿ, ಶಿಕ್ಷಣ ಬ್ರಹ್ಮ ಡಾ.ಕುರುಂಜಿ ವೆಂಕಟ್ರಮಣ ಗೌಡರಿಗೆ ಸುಳ್ಯದ ಜನರ ಪ್ರೀತಿ ದಕ್ಕಿತ್ತು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸಮಾಜಕ್ಕೆ ನೀಡಿದರು. ಕುರುಂಜಿಯವರಲ್ಲಿದ್ದ ಗುಣಗಳು ನಮ್ಮಲ್ಲಿ ಇದ್ದರೆ ನಾವು ಮನುಷ್ಯರಾಗುತ್ತೇವೆ. ಮನುಷ್ಯರನ್ನು ಮನುಷ್ಯರನ್ನಾಗಿಸುವ ಪ್ರಕ್ರಿಯೆಗೆ ಶಿಕ್ಷಣ ಅಗತ್ಯ ಇದೆ ಎಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ಮಾತನಾಡಿ ಸಮಾಜದಲ್ಲಿ ತುಳಿಯಲ್ಪಟ್ಟ, ವಿದ್ಯೆಯಿಂದ ವಂಚಿತರಾದವರಿಗೆ ಬೆಳಕನ್ನು ನೀಡಿದ ಮಹಾನ್ ಚಿಂತಕ ಡಾ. ಕುರುಂಜಿಯವರು. ಇದು ನಿಜವಾದ ಸಮಾಜ ಸೇವೆ. ಶಿಕ್ಷಣವೂ ವ್ಯಾಪಾರೀಕರಣವಾಗುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ ನಿಜವಾದ ಅರ್ಥದಲ್ಲಿ ಸರಸ್ವತಿ ಸೇವೆಯನ್ನೂ, ಸಮಾಜ ಸೇವೆಯನ್ನೂ ಮಾಡಿದ ಕೆವಿಜಿಯವರು ಸಣ್ಣ ಸ್ಥಳದಲ್ಲಿ ದೊಡ್ಡ ಚಿಂತನೆ ಇರಿಸಿ ಬದುಕಿದವರು ಎಂದರು.

ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರ ಅಧ್ಯಕ್ಷತೆ ವಹಿಸಿದ್ದರು. ದಿನಾಚರಣೆಯ ಸಮಿತಿ ಅಧ್ಯಕ್ಷ ಡಾ.ಎನ್.ಎ ಜ್ಞಾನೇಶ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪದಾಧಿಕಾರಿಗಳಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಹೇಮನಾಥ ಕುರುಂಜಿ, ಆಯುರ್ವೇದ ಕಾಲೀನಿ ಆಡಳಿತಾಧಿಕಾರಿ ಡಾ.ಲೀಲಾಧರ್, ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಯು.ಜೆ.ಉಜ್ವಲ್, ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಬಿ.ಟಿ.ಮಾದವ, ಕೆವಿಜಿಯ ನಾನಾ ವಿದ್ಯಾ ಸಂಸ್ಥೆಗಳ ಪ್ರಿನ್ಸಿಪಾಲ್ ಡಾ.ಮೋಕ್ಷ ನಾಯಕ್, ಡಾ.ಗಿರಿಧರ ಗೌಡ, ಡಾ.ಎನ್.ಎಸ್.ಶೆಟ್ಟರ್, ಸುನೀಲ್, ಬಾಲಕೃಷ್ಣ ಬೊಳ್ಳೂರು, ಚಿದಾನಂದ ಬಾಳಿಲ, ಯಶೋದ ರಾಮಚಂದ್ರ, ಶಿರೋಮಣಿ, ಶ್ರೀಕಾಂತ ಕುಡೆಕಲ್ಲು, ಉದಯಕೃಷ್ಣ, ಮಮತ, ಶಾಂತ ಬೈಪ್ಪಾಡಿತ್ತಾಯ, ಕೆವಿಜಿ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು, ಆಡಳಿತ ಮಂಡಳಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply