Header Ads
Header Ads
Breaking News

ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ಯು.ಟಿ.ಖಾದರ್ ಒತ್ತಾಯ

ಎನ್‌ಐಎ ಅಧಿಕಾರಿಗಳು ಬೆಳ್ತಂಗಡಿಯ ಮೌಲ್ವಿ ಅಬ್ದುಲ್ ರವೂಫ್ ಎಂಬವರನ್ನು ಬಂಧಿಸಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ ಶಂಕಿತ ಉಗ್ರನ ಬಂಧನ ಮಾಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ. ಆದ್ರೆ ಆ ವ್ಯಕ್ತಿ ಬಂಧನ ಆಗಿದೆ ಎನ್ನುವುದು ಸುಳ್ಳು. ರವೂಫ್ ಎಂಬುವರು ಕಳೆದ ಹಲವು ಕಳೆದ ಹಲವು ವರ್ಷಗಳಿಂದ ನನಗೆ ಗೊತ್ತಿದೆ.ಮಂಗಳೂರಿನ ಮಂಜನಾಡಿ ಮಸೀದಿಯಲ್ಲಿ ಗುರುವಿನ ಸಹಾಯಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ಧಿ ಹಬ್ಬಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಸುಖಾಸುಮ್ಮನೆ ಅವರ ಬಗ್ಗೆ ಗೊಂದಲ ಹುಟ್ಟು ಹಾಕಲಾಗಿದೆ. ಎನ್‌ಐಎ ರಾಷ್ಟ್ರದ ದೊಡ್ಡ ತನಿಖೆ ಸಂಸ್ಥೆಯಾಗಿದೆ. ಈ ಸುದ್ಧಿಪ್ರಸಾರವಾದ ಬಳಿಕ ಅಬ್ದುಲ್ ರವೂಫ್ ಅವರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರಿಂದ ಅಮಾಯಕ ವ್ಯಕ್ತಿ ರವೂಫ್ ನೊಂದಿದ್ದಾರೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವುದು ತಪ್ಪು ಅಂತಾ ಖಾದರ್ ಹೇಳಿದರು.

Related posts

Leave a Reply

Your email address will not be published. Required fields are marked *