Header Ads
Breaking News

ಸುಳ್ಳು ಹೇಳುವವನಿಗಿಂತ ಬಚ್ಚಾನೇ ಬೆಟರ್ : ಶಾಸಕ ಸುನೀಲ್ ಹೇಳಿಕೆಗೆ ಐವನ್ ಡಿಸೋಜಾ ಟಾಂಗ್!

ಕಾರ್ಕಳ ಶಾಸಕ ಸುನಿಲ್ ಕುಮಾರ್, ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಬಚ್ಚಾ ಎಂದಿದ್ದಾರೆ. ಸುಳ್ಳು ಹೇಳುವವನಿಗಿಂತ ಬಚ್ಚಾ ಬೆಟರ್. ಬಚ್ಚಾನಾಗಿಯೇ ಬಂದು ಅಭಿವೃದ್ಧಿ ಮಾಡ್ತಾರೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ದಾರೆ. ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಸುನೀಲ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಚ್ಚಾ ಒಳ್ಳೆಯ ಲೀಡರ್, ನಮ್ಮ ಯೂತ್ ಐಕಾನ್. ಬಿಜೆಪಿಯ ಎಂಎಲ್‌ಎ ಕ್ಯಾಂಡಿಡೇಟ್‌ಗಳೆಲ್ಲ ಬಹಳ ಅನುಭವಿಗಳೇ? ಎಂದು ಪ್ರಶ್ನಿಸಿದರು. (ಬೈಟ್). ನಳಿನ್ ಕುಮಾರ್ ಅವರು ಪೇಟಾ ತೊಟ್ಟು ಇದು ಚೌಕೀದಾರ ಪೇಟಾ ಅಂತಾರೆ. ಜನರಿಗೆ ಟೋಪಿ ಹಾಕಿದವರು, ಪೇಟ ಹಾಕ್ಬೇಕಿಲ್ಲ. ನಮ್ಮಲ್ಲಿ ಸಾಧನೆ ಮಾಡಿದವರಿಗೆ ಪೇಟ ತೊಡುವ ಸಂಪ್ರದಾಯವಿದೆ. ಆದರೆ ಇವರು ಪೇಟ ಹಾಕಿ ಚೌಕೀದಾರ್ ಪೇಟ ಎನ್ನುತ್ತಾರೆ. ಕಳೆದ ಹತ್ತು ವರುಷದಲ್ಲಿ ಪಾರ್ಲಿಮೆಂಟ್ ನಲ್ಲಿ ದ.ಕ. ಕುರ್ಚಿ ಖಾಲಿ ಇತ್ತು ಅದನ್ನು ನಾವು ಈಗ ಭರ್ತಿ ಮಾಡಬೇಕಿದೆ ಎಂದು ಹೇಳಿದರು.

ಇನ್ನು ಸಿಎಂ ಕುಮಾರಸ್ವಾಮಿಯಿಂದ ಗೂಢಚಾರಿಕೆ ಬಗ್ಗೆ ಸುಮಲತಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಐವನ್ ಡಿಸೋಜಾ, ಚುನಾವಣೆಯಲ್ಲಿ ಗೂಢಚಾರಿಕೆ ಸಾಧ್ಯವೇ ಇಲ್ಲ. ಚುನಾವಣಾ ಆಯೋಗದ ಅಧಿಕಾರಿಗಳ ಕೈಯಲ್ಲಿ ಎಲ್ಲವೂ ಇದೆ. ಒಬ್ಬ ಅಧಿಕಾರಿಯನ್ನು ತೆಗೆಯೋದು, ಬಿಡೋದು ಆಯೋಗಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *