Header Ads
Header Ads
Header Ads
Breaking News

ಸುಳ್ಳು ಹೇಳುವ ಸರದಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ಗುಡುಗು..

ಪ್ರಪಂಚದಲ್ಲಿ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಅಪಾಯಕಾರಿ ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಎಂಬುದಾಗಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಗುಡುಗಿದ್ದಾರೆ.

ಕಾಪುವಿನಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಗುಜರಾತಿನಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ನಮ್ಮ ದೇಶದ ಮಾಜಿ ಪ್ರಧಾನ ಮಂದಿ ಮನಮೋಹನ್ ಸಿಂಗ್ ಹಾಗೂ ಪ್ರಮುಖರನೇಕರು ಸೇರಿ ಪಾಕಿಸ್ಥಾನದೊಂದಿಗೆ ಗುಪ್ತ ಮಾತುಕತೆ ನಡೆಸಿದ್ದಾರೆ ಎಂಬ ಆರೋಪ ಮಾಡುವ ಮೂಲಕ ತನ್ನ ಸ್ಥಾನ ಮಾನದ ಗೌರವವನ್ನು ಬೀದಿಗೆ ತಳ್ಳಿದ್ದಾರೆ. ಅವರು ಮಾಡಿದ ಆರೋಪ ನಿಜವಾಗಿದ್ದಲ್ಲಿ ಇದಕ್ಕಿಂದ ದೊಡ್ಡ ದೇಶದ್ರೋಹದ ಕೆಲಸ ಬೇರೊಂದಿಲ್ಲ. ಅಂಥಹ ಪಾತಕಿಗಳನ್ನು ತಕ್ಷಣವೇ ಜೈಲಿಗೆ ತಳ್ಳುವ ಕೆಲಸವನ್ನು ಪ್ರಧಾನಿಯಾಗಿದ್ದುಕೊಂಡು ಮಾಡ ಬಹುದಾಗಿತ್ತು ಏಕೆ ಮಾಡಿಲ್ಲ..? ಇದು ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಹೂಡಿದ ತಂತ್ರವಾಗಿದ್ದು ಇದರಿಂದ ಅವರು ತನ್ನ ವರ್ಚಸ್ಸಿಗೆ ಮಸಿ ಬಳಿದುಕೊಂಡಂತ್ತಾಗಿದೆ ಎಂದರು.

ಈ ಸಂದರ್ಭ ಪ್ರಮುಖರಾದ ಬಸವನ ಗೌಡ, ರಿಜ್ವಾನ್ ಅರ್ಶದ್, ಶಾಫಿ ಪಾರಂಬಲ್, ಜಬೀ ಮಾಥರ್, ಆಸ್ಕರ್ ಪೆರ್ನಾಡೀಸ್, ಪ್ರಮೋದ್ ಮಧ್ವರಾಜ್, ಯು.ಟಿ. ಖಾದರ್, ಸಂಘಟಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply