Header Ads
Header Ads
Breaking News

ಸುವರ್ಣ ಸಂಭ್ರಮದಲ್ಲಿ ಬಂಟ್ವಾಳ ರೋಟರಿ ಕ್ಲಬ್

ಬಂಟ್ವಾಳ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಬಂಟ್ವಾಳ ರೋಟರಿ ಕ್ಲಬ್‌ನ ನೂತನ ಸಾಲಿನ ಅಧ್ಯಕ್ಷರಾಗಿ ಮಂಜುನಾಥ ಆಚಾರ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದರು.ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಾಯಾಜಿ ಮೆಮೊರಿಯಲ್ ಹಾಲ್‌ನಲ್ಲಿ ನಡೆದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸುವರ್ಣ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಬಿ.ಸಂಜೀವ ಪೂಜಾರಿಯವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ರೋಟರಿ ರೋಟರಿ ಕ್ಲಬ್‌ನ ಕಾರ್ಯಕ್ರಮಗಳು ಅವಿಸ್ಮರಣೀಯಗೊಳಿಸಲು ಎಲ್ಲಾ ಸದಸ್ಯರು ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿಕೊಂಡು ಅತ್ಯುತ್ತಮ ಯೋಜನೆಗಳನ್ನು ಅನಷ್ಠಾನಗೊಳಿಸುವ ಜೊತೆಗೆ ಸುವರ್ಣ ವರ್ಷಾಚರಣೆಯನ್ನು ಯಶಸ್ವಿಗೊಳಿಸೋಣ ಎಂದರು.

  ಮಂಗಳೂರು ಗಣೇಶ್ ಬೀಡಿಯ ಆಡಳಿತ ಪಾಲುದಾರ ಜಗನ್ನಾಥ ಶೆಣೈ ಸುವರ್ಣ ವರ್ಷಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರ ಮಾತನಾಡಿ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಬಂಟ್ವಾಳ ರೋಟರಿ ಕ್ಲಬ್ ಆಯೋಜಿಸುತ್ತಿರುವುದ ತುಂಬಾ ಖುಷಿ ನೀಡಿದೆ.ಸಮಾಜಮುಖಿ ಕಾರ್ಯಗಳು ರೋಟರಿ ಕ್ಲಬ್‌ನಿಂದ ನಿರತರವಾಗಿ ನಡೆಯುತ್ತಿರಲಿ ಎಂದರು. ಚುನಾಯಿತ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರೆವೇರಿಸಿದರು. ವಲಯ ೪ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಕ್ಲಬ್ ಬುಲೆಟಿನ್ ಬಿಡುಗಡೆ ಮಾಡಿದರು. ವಲಯ ಲೆಫ್ಟಿನೆಂಟ್ ಬಿ.ಸಂಜೀವ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ರಿತೇಶ್ ಬಾಳಿಗ, ನಿರ್ಗಮನ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನೂತನ ಕಾರ್ಯದರ್ಶಿ ಶಿವಾನಿ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಯುವಕಲಾವಿದೆ ಶಬರಿ ಗಾಣಿಗ ಅವರು ಲೈವ್‌ಆರ್ಟ್ ಮೂಲಕ ರೋಟರಿ ಕ್ಲಬ್ ಸಂಸ್ಥಾಪಕ ಪೌಲ್ ಪ್ಯಾರೀಸ್ ಅವರ ಭಾವಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.

Related posts

Leave a Reply