Breaking News

ಸೂಕ್ತ ವಲಸೆ ದಾಖಲೆ ಇಲ್ಲದ ಭಾರತದ ಅತುಲ್ ಪಟೇಲ್, ಅಟ್ಲಾಂಟ ವಿಮಾನ ಕಸ್ಟಮ್ಸ್ ವಶದಲ್ಲಿ ಸಾವು

ಸೂಕ್ತ ವಲಸೆ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಆರೋಪದ ಮೇಲೆ ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದ ಭಾರತದ ವ್ಯಕ್ತಿಯೊಬ್ಬರು ಅಧಿಕಾರಿಗಳ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ.
ಅಯ್ವತ್ತೆಂಟು ವರುಷದ ಅತುಲ್ ಕುಮಾರ್ ಬಾಬುಬಾಯ್ ಪಟೇಲ್ ಇದೇ ಹತ್ತರಂದು ಅಟ್ಲಾಂಟ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಬಳಿ ಸೂಕ್ತ ವಲಸೆ ದಾಖಲೆಗಳು ಇಲ್ಲದಿದ್ದ ಕಾರಣ, ಎರಡು ದಿನಗಳ ಮಟ್ಟಿಗೆ ವಲಸೆ ಮತ್ತು ಸುಂಕ ಜಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅನಂತರ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅತುಲ್ ಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತಿಯಾದ ಮಧುಮೇಹ ಮತ್ತು ರಕ್ತದೊತ್ತಡ ಕಂಡುಬಂತು. ಆದ್ದರಿಂದ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply