Breaking News

ಸೂಚ್ಯಂಕ ಏರಿಳಿತ ಶೇರು ಪೇಟೆ ಅತಂತ್ರ

ಐದು ವಾರಗಳ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಇಳಿಮುಖ ಹಾದಿಯಲ್ಲೇ ಸಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಡೆದ ಖರೀದಿಯಿಂದ ಸೂಚ್ಯಂಕ ಅಲ್ಪ ಏರಿಕೆ ಕಂಡಿತು.
ಸಂವೇದಿ ಸೂಚ್ಯಂಕ ೪೯ ಅಂಶ ಏರಿಕೆ ಕಂಡು, ೩೧,೨೬೨ ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ೨೧ ಅಂಶ ಏರಿಕೆ ಕಂಡು ೯,೬೬೮ ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸಾಧಿಸಿರುವುದು ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟಿನ ಚೇತರಿಕೆಗೆ ನೆರವಾಯಿತು. ಇದು ದೇಶಿ ಷೇರುಪೇಟೆಗಳ ಮೇಲೆಯೂ?ಪ್ರಭಾವ ಬೀರಿ ಸೂಚ್ಯಂಕಗಳನ್ನು ಅಲ್ಪ ಏರಿಕೆ ಕಾಣುವಂತೆ ಮಾಡಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

Related posts

Leave a Reply