Header Ads
Header Ads
Header Ads
Breaking News

ಸೂರಜ್ ಕಲಾಸಿರಿ – 2017 ಮೂರು ದಿನಗಳ ರಾಷ್ಟ್ರೀಯ ಕಲಾ ಮೇಳ ಡಿಸೆಂಬರ್ 21ರಿಂದ 23ರವರೆಗೆ ಮುಡಿಪು ಸೂರಜ್ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ

ಡಿಸೆಂಬರ್ 21ರಿಂದ 23ರವರೆಗೆ ಮುಡಿಪು ಸೂರಜ್ ಸಂಸ್ಥೆಯ ಆವರಣದಲ್ಲಿ ಸೂರಜ್ ಕಲಾಸಿರಿ 2017 ಮೂರು ದಿನಗಳ ರಾಷ್ಟ್ರೀಯ ಕಲಾ ಮೇಳ ನಡೆಯಲಿದೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಸೂರಜ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಂಜುನಾಥ್ ರೇವಣ್ಕರ್ ತಿಳಿಸಿದ್ದಾರೆ.
ಇಡೀ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಚಿತ್ರಣವನ್ನು ಮೂಡಿಸುವ ಸಲುವಾಗಿ ಸೂರಜ್ ಕಲಾಸಿರಿ ಮೂಡಿಬರಲಿದೆ ಎಂದು ತಿಳಿಸಿದರು. ಹೆಸರಾಂತ ಪತ್ರಕರ್ತ ಸಾಹಿತಿ ಮತ್ತು ಕಲಾವಿಮರ್ಶಕ ಶ್ರೀ ಎ. ಈಶ್ವರಯ್ಯ ಮಣಿಪಾಲ್ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಬಿಜೆಪಿ ಮುಖಂಡ ಬಿ.ಎಸ್.ಯೆಡಿಯೂರಪ್ಪ, ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಈ ಸಂದರ್ಭ ಅಭಿನಯ ಶಾರದೆ ಸೂರಜ್ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಿರುವುದಾಗಿ ತಿಳಿಸಿ ಕಾರ್ಯಕ್ರಮದ ವಿವರ ನೀಡಿದರು.ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ಹೆಗಡೆ ಸೋಂದಾ,ಸಂಘಟನಾ ಕಾರ್ಯದರ್ಶಿ ಭಸ್ಕರ ರೈ ಕುಕ್ಕುವಳ್ಳಿ, ಪ್ರಚಾರ ಸಮಿತಿ ಅಧ್ಯಕ್ಷೆ ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply