Header Ads
Header Ads
Header Ads
Breaking News

ಮುಡಿಪುವಿನ ಸೂರಜ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಸೂರಜ್ ಕಲಾಸಿರಿ-2019

ಮುಡಿಪುವಿನಲ್ಲಿ ಕಾರ್ಯಚರಿಸುತ್ತಿರುವ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ಸೂರಜ್ ಕಲಾಸಿರಿ-2019 ಕರ್ನಾಟಕ ಕಲಾ ದರ್ಶನ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ.ಪಿ.ಎಸ್.ಯಡಪಡಿತ್ತಾಯ ದೀಪ ಬೆಳಗಿಸಿ, ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿ ,ಪ್ರತಿಯೊಂದು ಸಂಸ್ಥೆಗೆ ಸಾಂಸ್ಕತಿಕ ಹಾಗೂ ಸಾಮಾಜಿಕ ಜವಬ್ದಾರಿಯಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಸೂರಜ್ ವಿದ್ಯಾ ಸಮೂಹ ಸಂಸ್ಥೆಯ ಕಾಳಜಿ ಶ್ಲಾಘನೀಯ ಎಂದು ಹೇಳಿದರು.

ಬಳಿಕ ಎಸಿಪಿ ಕೊದಂಡರಾಮ ಮಾತನಾಡಿ ಸೂರಜ್ ಕಲಾಸಿರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಸಾಂಸ್ಕೃತಿಕ ಕಲೆ ಉಳಿಸಲು ಇದೊಂದು ಅಭೂತಪೂರ್ವ ಕಾರ್ಯಕ್ರಮ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಮ್ಯಾಗಜೀನ್ ’ಸುಜ್ಜಾನ’ವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಅರವಿಂದ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್ ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ಮುಡಿಪು ಜಂಕ್ಷನ್ ನಿಂದ ಸೂರಜ್ ಕಲಾಸಿರಿ ನಡೆಯುವ ಗುಲಾಬಿ ಶ್ರೀಪಾದ ವೇದಿಕೆ ತನಕ ನಡೆದ ಚೆಂಡೆ, ಕುಣಿತ, ಭಜನೆ, ದಫ್, ರಾಜ್ಯದ ವಿವಿಧ ಕಲಾಪ್ರಕಾರಗಳ ನೃತ್ಯ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗ ಆಕರ್ಷಕ ಪಥ ಸಂಚಲನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಇನ್ನೂ ಮೊದಲ ದಿನ ನಡೆದ ಕನ್ನಡ ಜನಪದ ಗೀತೆ, ಗೀಗೀ ಪದ,ಬ್ಯಾರಿ ಕುಣಿತ ಕೋಲ್ಕಳಿ, ಕೊಂಕಣಿ ಗಾನ ನೃತ್ಯ ವೈಭವ, ನಾಲ್ ಗೊಡೆದ ನಡುಟ್ಟು ತುಳು ನಾಟಕ ನೆರೆದಿದ್ದವರ ಮನಸುರೆಗೊಂಡಿತು.

ಈ ಸಂದರ್ಭ ಸೂರಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ರೇವಣ್ಕರ್, ಕೊಂಕಣಿ ಅಕಾಡೆಮಿ ಸದಸ್ಯ ಅರುಣ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜುಬೇರ್ ಸಂಚಾಲಕಿ ಹೇಮಲತಾ ರೇವಣ್ಕರ್, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ರೆ.ಫಾ.ಡಾ. ಜೆ.ಬಿ. ಸಲ್ದಾನ್ಹ, ಮಂಗಳೂರಿನ ಅರವಿಂದ್ ಮೋಟಾರ್ಸ್ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *