Header Ads
Breaking News

ಸೂರು ಇಲ್ಲದ ಕುಟುಂಬಕ್ಕೆ ಸೂರು ಕಟ್ಟಿ ಕೊಟ್ಟ ಅನಾರು ವೀರ ಕೇಸರಿ ತಂಡ

ಬೆಳ್ತಂಗಡಿಯ ಪಟ್ರಮೆ ಗ್ರಾಮದ ಅನಾರು ಮೈಕೆ ಎಂಬಲ್ಲಿ ಸೂರು ಇಲ್ಲದ ಕುಟುಂಬಕ್ಕೆ ಅನಾರು ವೀರ ಕೇಸರಿ ತಂಡವು ಸೂರು ಕಟ್ಟಿ ಕೊಟ್ಟು ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಗಿರಿಜಾ ಎಂಬವರು ತನ್ನ ಎರಡು ಮಕ್ಕಳನ್ನು ಹಿಡಿದು ಕೊಂಡು ಮನೆ ಇಲ್ಲದೆ ಒಂದು ಸಣ್ಣ ಗುಡಿಸಲಲ್ಲಿ ವಾಸವಾಗಿದ್ದರು. ಇದನ್ನು ಕಂಡ ಸ್ಥಳೀಯ ವೀರ ಕೇಸರಿ ತಂಡದ ಯುವಕರು ಗ್ರಾಮದ ಬಿಜೆಪಿಯ ಪ್ರಮುಖರೊಂದಿಗೆ ಸೇರಿ ಒಂದು ಮನೆ ಕಟ್ಟಿ ಕೊಡಬೇಕೆಂದು ಪಣ ತೊಟ್ಟರು. ಅದೇ ರೀತಿ ಬೆಳ್ತಂಗಡಿ ತಾಲೂಕಿನ ಸ್ಪಂದನ ಸೇವಾ ಸಂಘ, ಹಾಗೂ ಊರವರ ಸಹಕಾರದಿಂದ ಹಾಗೂ ವೀರ ಕೇಸರಿ ಬಿಜೆಪಿಯ ಎಲ್ಲರೂ ಸೇರಿ ಒಂದು ಸುಸಜ್ಜಿತವಾದ ಮನೆ ಕಟ್ಟಿಸಿ ಕೊಟ್ಟಿದ್ದಾರೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಮನೆಯ ಕೀ ಹಸ್ತಾಂತರಿಸಿದ್ರು. ಬಳಿಕ ಮಾತನಾಡಿ ವೀರ ಕೇಸರಿ ತಂಡದ ಯುವಕರು ಒಂದು ಒಳ್ಳೆಯ ಮನೆ ಕಟ್ಟಿ ಕೊಡಿಸಿ ದೇಶಕ್ಕೇಮಾದರಿಯಾಗಿದ್ದಾರೆ ಇನ್ನೂ ಒಳ್ಳೊಳ್ಳೆ ಕೆಲಸ ಮಾಡಲಿ ಎಂದರು. ಈ ಸಂದರ್ಭದಲ್ಲಿ ವೀರಕೇಸರಿ ತಂಡದ ತಿಲಕ್, ಪ್ರಮುಖರಾದ ಉಮೇಶ್, ಡಾಗಯ್ಯ ಮನೋಜ್ ಪಟ್ರಮೆ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *