Header Ads
Header Ads
Breaking News

ಸೂರ್ಯನ ರಶ್ಮಿಯು ದೇವಿಯ ಬಿಂಬವನ್ನು ಬೆಳಗುವ ಅಪರೂಪದ ಸನ್ನಿವೇಷ ಪುತ್ತೂರು ತಾಲೂಕಿನ ಚಿಕ್ಕಪುತ್ತೂರು ದೇವಿಬೆಟ್ಟದಲ್ಲಿದೆ ದೇಗುಲ

ಮೀನ ಸಂಕ್ರಮಣದ ಶುಭ ದಿನದಂದು ಬೆಳಗ್ಗಿನ ಜಾವ, ಸೂರ್ಯನ ರಶ್ಮಿ ಯೊಂದು ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಬಿಂಬದ ಮೇಲೆ ಬೀಳುವ ಪ್ರಕ್ರಿಯೆ ಬಹು ಅಪರೂಪದ ದೃಶ್ಯ ಇಂದು ಮುಂಜಾನೆ ಸುಮಾರು ಏಳು ಘಂಟೆ ಪುತ್ತೂರಿನ ದೇವ ಬೆಟ್ಟದಲ್ಲಿ ಇದೇರೀತಿಯ ಸನ್ನಿವೇಶ ನಡೆಯಿತು. ವರ್ಷದಲ್ಲಿ ಒಂದೆ ಒಂದು ದಿನ ಈ ದೇವಳದಲ್ಲಿ ಮೂರು ಬಾಗಿಲುಗಳನ್ನು ದಾಟಿ ಸೂರ್ಯನ ಕಿರಣವೊಂದು ದೇವರನ್ನು ಸ್ಪರ್ಷಿಸುವುದು. ವರ್ಷಂಪ್ರತಿ ನಡೆಯುವಂತೆ ಈ ಬಾರಿಯು ಈ ವಿಷೇಶ ಸನ್ನಿ ವೇಷ ಇಲ್ಲಿ ನಡೆಯಿತು. ಕೆಲವೇ ದೇಗುಲಗಳಲ್ಲಿ ಮಾತ್ರ ಇಂಥಹ ದೃಷ್ಯಗಳು ನಮಗೆ ಕಾಣಸಿಗುತ್ತದೆ.

ಹೌದು ಎಲ್ಲಾ ದೇವಾಲಯಗಳಿಗು ಓಂದಲ್ಲ ಓಂದು ವಿಶೇಷ ಇರುತ್ತದೆ ಇಂಥಹುದೇ ಒಂದು ವಿಷೇಶ ದೇಗುಲ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಪುತ್ತೂರು ದೇವಿಬೆಟ್ಟದಲ್ಲಿದೆ. ಇದೇ ಆ ದೇವಿ ಬೆಟ್ಟ. ಈ ಬೆಟ್ಟದ ತುದಿಯಲ್ಲಿರುವ ದೇವಿಯ ಮಂದಿರಕ್ಕೆ ಪ್ರತೀ ಮೀನ ಸಂಕ್ರಮಣದಂದು ಸೂರ್ಯನ ರಶ್ಮಿಯು ದೇವಿಯ ಬಿಂಬವನ್ನು ಬೆಳಗುವ ಅಪರೂಪದ ಸನ್ನಿವೇಷ ನಡೆಯಿತು. ಪ್ರಕ್ರತಿಯ ಮುಖಾಂತರ ಈ ರೀತಿಯ ವೈಷಿಷ್ಟ ರೀತಿಯಲ್ಲಿ ಸೂರ್ಯ ದೇವರು ಬೆಳಕನ್ನು ಹಾಯಿಸಿ ದೇವರ ಬಿಂಬವನ್ನು ಬೆಳಗಿಸುತ್ತದೆ .ಇಡೀ ದೇಶದಲ್ಲಿ ಕೆಲವೆ ಕೆಲವು ದೇಗುಲದಲ್ಲಿ ಇಂತಹ ಪ್ರಕ್ರಿಯೆಗಳು ನಡೆಯುತ್ತದೆ. ಗವಿ ಗಂಗಾದೇಶ್ವರ ದೇವರಿಗೆ ಈ ರೀತಿಯ ಸೂರ್ಯನ ಕಿರಣ ಬೀಳುತ್ತದೆ. ಇಂತಹುದೆ ಸನ್ನವೇಶ ಇದೀಗ ಪುತ್ತೂರಿನಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಭಕ್ತಾದಿಗಳು
ಲಕ್ಷ್ಮೀ ಬೆಟ್ಟವೆಂದೇ ಖ್ಯಾತಿವೆತ್ತ ಈ ಬೆಟ್ಟದಲ್ಲಿರುವ ದೇವಿಯ ದೇವಸ್ಥಾನವು ಬೆಟ್ಟದ ತುದಿಯಲ್ಲಿದ್ದು , ಮೀನ ಸಂಕ್ರಮಣದಂದು ನಡೆಯುವ ಈ ಅಪರೂಪದ ದೃಶ್ಯವನ್ನು ಕಂಡು ಮೈ ಮರೆಯುತ್ತಾರೆ. ಸುಮಾರ ಐದು ವರ್ಷಗಳಿಂದ ನಾನು ಈ ದೇವಾಲಯಕ್ಕೆ ಬರುತ್ತಿದ್ದೇನೆ.ಈ ಸಂದರ್ಬದಲ್ಲಿ ಇಲ್ಲಿ ವಿಷೇಶ ಪೂಜೆಗಳು ನಡೆಯುತ್ತದೆ ಮತ್ತು ಇಷ್ಟಾದಿಗಳು ಇಲ್ಲಿ ನೆರವೇರುತ್ತದೆ ಎಂದು ನಂಬಿಕೆ ಇಲ್ಲಿನ ಭಕ್ತಾದಿಗಳಲ್ಲಿ. ಮುಂದಿನ ದಿನಗಳಲ್ಲಿ ಈ ದೇಗುಲದ ಜೀರ್ಣೋದ್ದಾರ ನಡಯಲಿದೆ. ಇಂತಹ ವಿಷೇಶ ಸನ್ನಿವೇಶಗಳನ್ನು ವೀಕ್ಷಿಸಿ ಈ ಬಾಗದ ಭಕ್ತಾಧಿಗಳು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Related posts

Leave a Reply