Header Ads
Header Ads
Header Ads
Breaking News

ಸೂರ್ಯವರ್ತುಲ ವಿಸ್ಮಯ ಆಕಾಶದಲ್ಲಿ ವಿಶಿಷ್ಠ ವಿದ್ಯಾಮಾನ

 

ಕುಂದಾಪುರ: ಕುಂದಾಪುರ ಪರಿಸರದಲ್ಲಿ ಶುಕ್ರವಾರ ಆಕಾಶದಲ್ಲಿ ವಿಶಿಷ್ಟ ವಿದ್ಯಾಮಾನ ಜರುಗಿತು. ಜನರಿಗೆ ಪ್ರಖರವಾಗಿ ಬೆಳಗುತ್ತಿದ್ದ ಸೂರ್ಯನ ಸುತ್ತ ವರ್ತುಲವೊಂದು ರಚನೆಗೊಂಡಿತ್ತು. ಇದರ ಪರೀಧಿಯಲ್ಲಿ ಕಾಮನಬಿಲ್ಲಿನ ಬಣ್ಣ ಮೂಡಿದ್ದು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿತ್ತು. ಆಗಸದ ಅಲ್ಲಲ್ಲಿ ಚದುರಿದಂತೆ ಮೋಡಗಳ ತುಣುಕುಗಳಿದ್ದು ತೇವಾಂಶದಿಂದ ಈ ವಿದ್ಯಮಾನ ಸಂಭವಿಸಿದೆ. ಈ ರೀತಿ ವರ್ತುಲ ಸೂರ್ಯ ಮತ್ತು ರಾತ್ರಿವೇಳೆ ಚಂದ್ರನಿಗೂ ಉಂಟಾಗುತ್ತದೆ. ಬೆಳಗಿನ ಹೊತ್ತು ಸೂರ್ಯ ವರ್ತುಲ ಉಂಟಾದರೆ ಮಳೆ ಕಡಿಮೆಯಾಗುತ್ತದೆ, ಸಂಜೆ ಉಂಟಾದರೆ ಹೆಚ್ಚಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದನ್ನು ಗಮನಿಸಿದ ಕುಂಭಾಶಿಯ ಸಾವಿತ್ರಮ್ಮ ಎಂಬವರು ನಡುಮದ್ಯಾಹ್ನದಲ್ಲಿ ಸೂರ್ಯವರ್ತುಲ ರಚನೆಗೊಂಡಿದ್ದರಿಂದ ಮಳೆ ಬಿಸಿಲುಗಳ ಜುಗಲ್ ಬಂದಿ ಉಂಟಾಗಬಹುದು ಎಂದಿದ್ದಾರೆ. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ತ ಡಾ. ಎಂ.ಬಿ. ನಟರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ ಈ ಅಪರೂಪದ ವಿದ್ಯಮಾನ ಸುಮಾರು ೨೦ಸಾವಿರ ಅಡಿಗಳ ಎತ್ತರದಲ್ಲಿ ಶೇಖರಣೆಗೊಂಡ ಸಿರ್ರಸ್ ಮೋಡಗಳಲ್ಲಿರುವ ಮಂಜಿನ ತುಣುಕುಗಳ ಮೂಲಕ ಸೂರ್ಯನ ಬೆಳಕಿನ ವಕ್ರೀಭವನದ ಕಾರಣದಿಂದ ಇಂತಹ ವರ್ತುಲ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ. ಅವರೇ ಈ ಖಗೋಳ ವಿಸ್ಮಯ ಛಾಯಾಚಿತ್ರವನ್ನೂ ಸೆರೆ ಹಿಡಿದಿದ್ದಾರೆ.

Related posts

Leave a Reply