
ಯೆನೆಪೋಯ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ಮಕ್ಕಳಿಲ್ಲದ ತಾಯಂದಿರಿಗೆ ನೀಡುವ ಉಚಿತ ಚಿಕಿತ್ಸಾ ಯೋಜನೆ “ಸೃಷ್ಟಿ” ಯಿಂದಾಗಿ ಚಿಕ್ಕಮಗಳೂರಿನ ಶಶಿಕಲಾ ಎಂಬ 35ವರ್ಷದ ಮಹಿಳೆ ಮದುವೆಯಾಗಿ ಒಂಬತ್ತು ವರ್ಷದ ಬಳಿಕ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಸೃಷ್ಟಿ ಯೋಜನೆಯ ಫಲಾನುಭವಿಯಾಗಿ ಇತರ ದಂಪತಿಗೆ ಸ್ಪೂರ್ತಿ ತಂದಿದ್ದಾರೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಹೇಳಿದರು.ಅವರು, ಸೃಷ್ಟಿ ಹೋಮಿಯೋಪಥಿ ಫರ್ಟಿಲಿಟಿ ಕೇರ್, ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಹಾಗೂ ಯೇನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಯೇನೆಪೋಯ ವಿವಿಯ ನರಿಂಗಾನ ಕೊಲ್ಲರಕೋಡಿ ಕ್ಯಾಂಪಸ್ ನ ಹೋಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಈ ವೇಳೆ ಯೆನೆಪೋಯ ಹೋಮಿಯಪಥಿ ವೈದ್ಯಕೀಯ ಮಹಾ ವಿದ್ಯಾಲಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ವಿವೇಕಾನಂದ, ವರ್ಣೇಕರ್, ಪ್ರಸೂತಿ ತಜ್ಞೆ ಡಾ. ಕಿರಣ್ ಕಮ್ಮಾರ್ ಹಾಗೂ ಯೆನೆಪೋಯ ಹೊಮಿಯೋಪಥಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಉಪಸ್ಥಿತರಿದ್ದರು.