Header Ads
Header Ads
Breaking News

ಸೆ.1ರಂದು ಉದ್ಘಾಟನೆಗೊಳ್ಳಲಿದೆ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ 11 ಸಾವಿರ ಪೋಸ್ಟ್ ಮೆನ್‌ಗಳ ನೇಮಕ ಸೆ.1 ಬನ್ನಂಜೆಯಲ್ಲಿ ಡಿಸಿ ಅವರಿಂದ ಕಾರ್ಯಕ್ರಮ ಉದ್ಘಾಟನೆ

 ಸಾಮಾನ್ಯ ಜನರಿಗೆ ಸುಲಭವಾಗಿ, ಅತ್ಯಂತ ವಿಶ್ವಾಸಾರ್ಹ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಅಂಚೆ ಇಲಾಖೆ ಮುಂದಾಗಿದ್ದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗಳು ಸೆ.1ರಿಂದ ಅಸ್ತಿತ್ವಕ್ಕೆ ಬರಲಿದೆ ಅಂತ ಉಡುಪಿ ಅಂಚೆ ಕಚೇರಿಯ ಅಧೀಕ್ಷಕ ರಾಜಶೇಖರ್ ಭಟ್ ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಕೇವಲ ಆದಾರ್ ಕಾರ್ಡ್ ಅಥವಾ ಮೊಬೈಲ್ ನಂಬ್ರ ನೀಡಿ ಖಾತೆಯನ್ನು ತೆರೆಯಲು ಅವಕಾಶ ಇದ್ದು ನಂತರದ ಬ್ಯಾಂಕಿಂಗ್ ವ್ಯವಹಾರಗಳು ಕೂಡಾ ಕಾಗದ ರಹಿತವಾಗಿರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳಿಗೆ ಒತ್ತು ನೀಡುವ ಉದ್ದೆಶದಿಂದ ದೇಶದಾದ್ಯಂತ ಪ್ರತೀ ಜಿಲ್ಲೆಯಲ್ಲಿ ಒಂದೊಂದರಂತೆ 650 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗಳು ಸೆ.1ರಿಂದ ಆರಂಭಗೊಳ್ಳಲಿದ್ದು ಇದಕ್ಕಾಗಿ ಗ್ರಾಮೀಣ, ನಗರ ಭಾಗದಲ್ಲಿ 11 ಸಾವಿರ ಪೋಸ್ಟ್ ಮೆನ್ ಗಳನ್ನು ನಿಯೋಜಿಸಲಾಗಿದೆ. ಉಡುಪಿಯಲ್ಲಿ ಪ್ರದ್ಝಾನ ಅಂಚೆ ಕಚೆರಿಯಲ್ಲಿ ಈ ಶಾಖೆ ಆರಂಭಗೊಳ್ಳಲಿದ್ದು ಬನ್ನಂಜೆ, ಉಚ್ಚಿಲ, ಬೆಳಪುವಿಒನಲ್ಲಿ ಉಪ ಶಾಖೆಗಳು ಆರಂಭವಾಗಲಿದೆ. ಸೆ.1ರಂದು ಬನ್ನಂಜೆಯ ನಾರಾಯಣ ಗುರು ಸಭಾ ಭವನದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಈ ಬ್ಯಾಂಕ್ನನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ, ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಭಾಗವಹಿಸಲಿದ್ದರಎ ಎಂದು ಮಾಹಿತಿ ನೀಡಿದರು.

Related posts

Leave a Reply