Header Ads
Header Ads
Breaking News

ಸೆ. 10ರಂದು ಸುಳ್ಯದಲ್ಲಿ ಬೃಹತ್ ಹಕ್ಕೋತ್ತಾಯ ಪ್ರತಿಭಟನಾ ಸಭೆ

ಸುಳ್ಯ ತಾಲೂಕು ಅಭಿವೃದ್ದಿಯಲ್ಲಿ ಹಿಂದುಳಿದಿದೆ. ಹಲವು ಬೇಡಿಕೆಗಳು ನೆನೆಗುದಿಗೆ ಬಿದ್ದಿದೆ. ಸರ್ಕಾರಿ ಕಚೇರಿಗಳಲ್ಲಿ ಸಮರ್ಪಕ ರೀತಿಯಲ್ಲಿ ಸೇವೆ ಸಿಗುತ್ತಿಲ್ಲ. ಇವುಗಳನ್ನು ಶಾಸಕಾಂಗ ಮತ್ತು ಕಾರ್ಯಾಂಗ ಮಾಡಬೇಕಿತ್ತು. ಅವು ವಿಫಲವಾಗಿರುವ ಕಾರಣ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ತಾಲೂಕಿನ ಅಭಿವೃದ್ದಿ ಬೇಡಿಕೆಗಳಿಗಾಗಿ ಮತ್ತು ಸರಿಪಡಿಸುವಿಕೆಗೆ ಆಗ್ರಹಿಸಿ ಸೆ. 10ರಂದು ಬೃಹತ್ ಹಕ್ಕೋತ್ತಾಯ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ ಎಂದು ಮಲಿನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಕೆ.ಎಲ್ ಹೇಳಿದರು. ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನ ಸರಕಾರಿ ಇಲಾಖೆಗಳಲ್ಲಿ ಜನರಿಗೆ ಸಮರ್ಪಕವಾದ ಸೇವೆ ಸಿಗುತ್ತಿಲ್ಲ. ಇದಕ್ಕೆ ಜನಜಾಗೃತಿ ಅಗತ್ಯ. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಸುಬ್ರಹ್ಮಣ್ಯದಲ್ಲಿ ಸುಸಜ್ಜಿತವಾದ ಆಸ್ಪತೆ ಇಲ್ಲ. ಕಂದಾಯ ಇಲಾಖೆಯಲ್ಲಿ ಯಾವುದಕ್ಕೂ ತಾಳಮೇಳ ಇಲ್ಲದ ಸೇವೆಗಳು ಸಿಗುತ್ತಿದೆ ಎಂದ್ರು. ಸುದ್ದಿಗೋಷ್ಟಿಯಲ್ಲಿ ಅಶೋಕ್ ಎಡಮಲೆ, ಸುಳ್ಯಕೋಡಿ ಮಾಧವ ಗೌಡ, ದೀಕ್ಷಿತ್ ಜಯನಗರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *