Header Ads
Header Ads
Breaking News

ಸೆ.23ರಂದು ನೂತನ ಬಿಷಪ್ “ಡಾ. ಪೀಟರ್ ಪೌಲ್ ಸಲ್ಡಾನಾ” ಅವರಿಗೆ ಸನ್ಮಾನ

ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ಡಾ. ಪೀಟರ್ ಪೌಲ್ ಸಲ್ಡಾನಾ ಅವರಿಗೆ ಸೆಪ್ಟೆಂಬರ್23 ರಂದು ಕಿರೆಂ ಚರ್ಚ್ ವತಿಯಿಂದ ಅವರನ್ನು ಸನ್ಮಾನಿಸಲಾಗುದು ಎಂದು ಕಿರೆಂಚರ್ಚ್ ನ ಧರ್ಮಗುರು ವಿಕ್ಟರ್ ಡಿಮೆಲ್ಲೋ ಹೇಳಿದರು.ಅವರು ಕಿರೆಂ ಚರ್ಚ್ ಸಭಾಗಂಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ ನೂತನ ಧರ್ಮಗುರುಗಳು ಕಿರೆಂ ಧರ್ಮ ಕೇಂದ್ರದ ವ್ಯಾಪ್ತಿಯವರಾಗಿದ್ದಾರೆ ಆದರಿಂದ ನಮ್ಮ ಚರ್ಚ್‌ನಲ್ಲಿ ಈ ಸಮಾರಂಭ ಆಯೀಜಿಸಿದ್ದೇವೆ. ಅಂದು ಬೆಳಿಗ್ಗೆ9 ಗಂಟೆಗೆ ಮೂರುಕಾವೇರಿಯಲ್ಲಿ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುದು, ನಂತರ ಕಿರೆಂ ಚರ್ಚ್ ನಲ್ಲಿ ದಿವ್ಯಬಲಿ ಪೂಜೆಯನ್ನು ನೆರವೇರಿಸಲಿದ್ದಾರೆ, ಬಲಿ ಪೂಜೆಯ ನಂತರ ದ್ವಿಶತಮಾನೋತ್ಸವ ಸಭಾಭವನದಲ್ಲಿ ನೂತನ ಧರ್ಮಾಧ್ಯಕ್ಷರನ್ನು ಮತ್ತು ಮೂಲ್ಕಿ ಮೂಡಬಿದ್ರೆ ನೂತನ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಗುದು ಕಾರ್ಯಕ್ರಮದಲ್ಲಿ ಗುಲ್ಬರ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರೋಬರ್ಟ್ ಮಿರಾಂದ, ಮತ್ತು ಕಿನ್ನಿಗೋಳಿ ಚರ್ಚ್ ಧರ್ಮಗುರು ಮತ್ತು ಇನ್ನಿತರ ಗಣ್ಯರು ಬಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಟಿಯಲ್ಲಿ ಸಹಾಯಕ ಧರ್ಮಗುರು ಜಯಪ್ರಕಾಶ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಬರ್ಟನ್ ಸಿಕ್ವೇರ, ಕಾರ್ಯದರ್ಶಿ ಅನಿತಾ ಡಿಸೋಜ, ಅಭಿನಂದನಾ ಸಮಿತಿ ಸಂಚಾಲಕ ಸಂತಾನ್ ಡಿಸೋಜ ಪ್ರಚಾರ ಸಮಿತಿ ಸದಸ್ಯ ನೈಜಿಲ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply