Header Ads
Header Ads
Breaking News

ಸೆ.23ರಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ

ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ2017-18ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.23ರಂದು ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆರಾರ್ಡ್ ಟವರ್‍ಸ್, ವೇದಿಕೆಯ 8ನೇ ವಾರ್ಷಿಕ ಮಹಾಸಭೆಯು ವೇದಿಕೆಯ ಅಧ್ಯಕ್ಷ ಮೆಕ್ಸಿಂ ಡಿಸಿಲ್ವಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಮೂಲಗೇಣಿ ಸಂತ್ರಸ್ತ ಕುಟುಂಬಗಳು ಒಗ್ಗಟ್ಟಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಹೋರಾಟ ನಡೆಸಿ ಹಕ್ಕನ್ನು ಪಡೆಯುವಂತೆ ಕರೆ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ರೊನಾಲ್ಡ್ ಡಿಸಿಲ್ವಾ, ಸಂದೇಶ್ ಪ್ರಭು, ಜೋಸೆಫ್ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು. 

Related posts

Leave a Reply