Header Ads
Header Ads
Breaking News

ಸೆ.27ರಿಂದ 30ರವರೆಗೆ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ

 ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆಪ್ಟಂಬರ್ 27ರಿಂದ 30ರವರೆಗೆ ಜಿಲ್ಲೆಯ ಪ್ರಸಿದ್ದ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಪರ್ಯಟನ್ ಪರ್ವ್ ಯೋಜನೆಯಡಿ ಪ್ರವಾಸಿಗರನ್ನು ಸೆಳೆಯಲು ಉತ್ಸವಗಳನ್ನು ಆಯೋಜಿಸಲಾಗುತ್ತಿದೆ ಅಂತ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ದೇಶದ ಅನನ್ಯ ಹಾಗೂ ವಿಶಿಷ್ಟ ಪ್ರವಾಸಿ ತಾಣಗಳನ್ನು ಗುರುತಿಸುವ ಕೇಂದ್ರ ಸರ್ಕಾರ ಪರ್ಯಟನ್ ಪರ್ವ್ ಉತ್ಸವಗಳನ್ನು ಆಯೋಜಿಸಲು ನಿರ್ದರಿಸಿದೆ.ಅದರಂತೆ ಕೇಂದ್ರ ಸರಕಾರ ಗುರುತಿಸಿರುವ ಪಟ್ಟಿಯಲ್ಲಿ ಮಲ್ಪೆ, ಪಡುಬಿದ್ರೆ, ತ್ರಾಸಿ, ಮರವಂತೆ ಬೀಚ್ ಗಳು, ಕಾರ್ಕಳದ ಸ್ಮಾರಕಗಳು ಸ್ಥಾನಪಡೆದಿವೆ. ಹಾಗಾಗಿ ಈ ತಾಣಗಳಲ್ಲಿ ಉತ್ಸವಗಳನ್ನು ಆಯೋಜಿಸುವಂತೆ ಕೇಂದ್ರ ಸೂಚನೆ ನೀಡಿದೆ ಎಂದರು.ಮಲ್ಪೆ ಬೀಚ್ ನಲ್ಲಿ ಸೆ.27ರಿಂದ ನಾಲ್ಕು ದಿನಗಳ ಕಾಲ ಬೀಚ್ ಫೆಸ್ಟಿವಲ್ ನಡೆಸಲಾಗುವುದು. ಹಂಪಿಯಲ್ಲಿ ಹಂಪಿ ಉತ್ಸವವನ್ನು ಅದ್ದೂರಿಯಾಗಿ ನಡೆಸುವಂತೆ ಮಲ್ಪೆಯಲ್ಲಿ ಬೀಚ್ ಉತ್ಸವ ಮಾಡಲಾಗುವುದು. ಅದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು

Related posts

Leave a Reply