Header Ads
Header Ads
Header Ads
Header Ads
Header Ads
Header Ads
Breaking News

ಸೆ.28ರಂದು ಬಾಸೆಲ್ ಮಿಶನ್ ಮೆಮೋರಿಯಲ್‍ನಲ್ಲಿ ಉಡುಪಿ ಜಿಲ್ಲೆಯ ಸಂವಿಧಾನ ಸಮಾವೇಶ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲೆಯ ಸಂವಿಧಾನ ಸಮಾವೇಶ ಸೆಪ್ಟಂಬರ್ 28ರಂದು ಬಾಸೆಲ್ ಮಿಶನ್ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ತಿಳಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ 75 ಶೇಕಡಾ ಮೀಸಲಾತಿಯನ್ನು ಜಾರಿ ಗೊಳಿಸಿ ಇಂದಿಗೆ ನೂರು ವರ್ಷಗಳು ಸಂದಿವೆ. ಈ ನಾಡ ದೊರೆಯನ್ನು ಸ್ಮರಿಸುವ ಮೂಲಕ ಸಮಿತಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಾಮಾಜಿಕ ಪಾಲುದಾರಿಕೆ ಆಗ್ರಹಿಸಿ ಸರ್ವ ಜನರ-ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದಲ್ಲಿ ಭೂಮಿಯ ಸಮಾನ ಹಂಚಿಕೆ, ವಸತಿ ಹೀನರಿಗೆ ಸೂರು, ಸರಕಾರಿ ಶಾಲೆಗಳ ಉನ್ನತೀಕರಣ, ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಾವಕಾಶ, ಖಾಸಗೀ ಕ್ಷೇತ್ರದಲ್ಲಿ ಸಾಮಾಜಿಕ ಪಾಲುದಾರಿಕೆ ಹೀಗೆ ಹಲವು ಹಕ್ಕೂತ್ತಾಯವನ್ನು ಮಾಡಲಾಗುವುದು ಎಂದರು. ಸಾಮಾವೇಶದ ಹಿನ್ನಲೆಯಲ್ಲಿ ಬೋರ್ಡ್ ಶಾಲೆಯಿಂದ ಸಮಾವೇಶ ನಡೆಯುವ ಸ್ಥಳದ ತನಕ ರ್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಸಮಿತಿಯ ಲೋಕೇಶ್ ಕಂಚಿನಡ್ಕ, ಶಿವರಾಮ್ ಕಾಪು, ಅನ್ನಪ್ಪ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *