Header Ads
Breaking News

ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಾವಯುವ-2019

ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಸ್ಕೀನಾ ಸಭಾಂಗಣದ ಎಲ್‌ಸಿಆರ್‌ಐ ಬ್ಲಾಕ್‌ನಲ್ಲಿ ವಾರ್ಷಿಕ ಚಟುವಟಿಕೆ ಕೇಂದ್ರ ಬಿಂದು ಸಾವಯವ-2019 ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವರ್ಷಪೂರ್ತಿ ನಡೆಯುವ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರ ಬಿಂದುವನ್ನು ಕ್ಯಾಂಪಸ್‌ನಲ್ಲಿ ಅನಾವರಣ ಮಾಡಲಾಯಿತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕಿರಿಯ ಸಂಶೋಧಕ ಸ್ವಸ್ಥಿಕ್ ಪದ್ಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಅಲೋಶಿಯಸ್ ಇನ್ಸ್‌ಸ್ಟಿಟ್ಯೂಷನ್ ರೆಕ್ಟರ್ ರೆವರೆಂಡ್ ಫಾದರ್ ಡೈನೀಶಿಯಸ್ ವಾಜ್ ಎಸ್ ಜೆ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಸ್ವಸ್ಥಿಕ್ ಪದ್ಮಾ ಅವರ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಪಾಶ್ವ ಚಿಂತನೆಯ ಪ್ರದರ್ಶನಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಅವರು ಕಾಲೇಜಿನಲ್ಲಿ ಅಳವಡಿಸಿದ ಸಾವಯುವ ಅದರ ಮಹತ್ವ ಮತ್ತು ಪ್ರಸ್ತುತತೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.ಈ ಸಂದರ್ಭ ಡಾ. ಲಿಂನ್ಡ್ ಡಾಪ್ನಿ ಲಾಸ್ರಾಡೊ, ಮೆಲಿಟಾ, ಲಾಯ್ಡ್ ವಿನೀತ್ ಸಲ್ಡಾನಾ, ರೂಪಾಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *