Header Ads
Header Ads
Breaking News

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ಸರಕು ಮತ್ತು ಸೇವಾ ತೆರಿಗೆ ಎರಡು ದಿನಗಳ ಕಾರ್ಯಾಗಾರ

ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರ್ ಕಾಲೇಜಿನ ವತಿಯಿಂದ ಸರಕು ಮತ್ತು ಸೇವಾ ತೆರಿಗೆ ಕುರಿತು ೨ ದಿನಗಳ ಕಾಲ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರ್ ಕಾಲೇಜಿನ ವ್ಯವಹಾರ ಆಡಳಿತ ಇಲಾಖೆ ವತಿಯಿಂದ ಸರಕು ಮತ್ತು ಸೇವಾ ತೆರಿಗೆ ಬಗೆ ೨ ದಿನಗಳ ಕಾರ್ಯಾಗಾರ ನಡೆದವು. ಕಾರ್ಯಾಗಾರದಲ್ಲಿ ರೇ.ಫಾದರ್ ವಿಲ್ಫೇಡ್ ಪ್ರಕಾಶ್ ಡಿಸೋಜಾ ಪಾಲ್ಗೊಂಡು ಮಾತನಾಡಿ, ಜಿ‌ಎಸ್‌ಟಿಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಳ್ಳಬೇಕು. ಜಿ‌ಎಸ್‌ಟಿ ಹೆಚ್ಚಿನ ಮಾಹಿತಿ ಪಡೆದುಕೊಂಡು,ಮತ್ತೊಬ್ಬರಿಗೆ ತಿಳಿಯ ಪಡಿಸಬೇಕೆಂದರು.

ಈ ವೇಳೆ ವಾಣಿಜ್ಯ ತೆರಿಗೆ ಉಪ ಆಯುಕ್ತ ಶಂಭು ಭಟ್ ಮಾತನಾಡಿ, ಜಿ‌ಎಸ್‌ಟಿನಿಂದಾಗಿ ವ್ಯಾಪರ ವಹಿವಾಟಿನಲ್ಲಿ ಪ್ರಾರದರ್ಶಕತೆ ಇರುತ್ತದೆ. ಇದೊಂದು ಅನುಕೂಲಕವಾಗಿದೆ ಅಂತಾ ಹೇಳಿದ್ರು.
ಇನ್ನೂ ವಾಣಿಜ್ಯ ತೆರಿಗೆ ಉಪ ಆಯುಕ್ತ ಬಿ.ಎನ್.ರಾಮ್ ಗೌಡ ಮಾತನಾಡಿ,ದೇಶದ ಅಭಿವೃದ್ಧಿಗೆ ತೆರಿಗೆ ಮಹತ್ವದಾಗಿದೆ. ೨೦೧೭ರ ಜುಲೈನಲ್ಲಿ ಆರಂಭಗೊಂಡ ಜಿ‌ಎಸ್‌ಟಿ ತೆರಿಗೆ ದೊಡ್ಡ ಮಟ್ಟಿನ ಕಾಂತ್ರಿಕಾರಿ ಅಂತಾ ಹೇಳಿದ್ರು.

ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಕಮೀಷನರ್ ಹೇಮಲತಾ, ಸಂಸ್ಥೆ ಸಹ ನಿರ್ದೇಶಕ ರೇ.ಫಾದರ್ ರೋಹಿತ್ ಡಿಕೋಸ್ಟಾ, ಪ್ರಾಚಾರ್ಯ ಡಾ|ಜೋಸೆಫ್ ಗೋಝ್ಲಾವಿಸ್ , ಉಪ ಪ್ರಾಚಾರ್ಯ ಡಾ|ರಿಯೋ ಡಿಸೋಜಾ ಮತ್ತಿತರು ಉಪಸ್ಥತರಿದ್ರು.

Related posts

Leave a Reply