
ಬ್ರಹ್ಮಾವರದಲ್ಲಿ ಸೈಂಟ್ ಮೇರಿಸ್ ಓರ್ಥೋಡಾಕ್ಸ್ ಸಿರಿಯನ್ ಕೆಥಡ್ರಲ್ ಚರ್ಚ್ನ ನೂತನ ದೇವಾಲಯದ ಲೋಕಾರ್ಪಣೆಯ ಎರಡನೇ ದಿನದ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಸಭಾದ ಪರಮಾಧ್ಯಕ್ಷರಾದ ಪರಮ ಪೂಜ್ಯ ಮೋರಾನ್ ಮೋರ್ ಬಸ್ಸೆಲಿಯೋಸ್ ಮಾರ್ತೋಮಾ ಪೌಲೋಸ್ ದ್ವಿತೀಯರು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ರಾತ್ರಿ ಪ್ರಾರ್ಥನೆ, ಪ್ರಭಾತ ಪ್ರಾರ್ಥನೆ ಬಳಿಕ ಪವಿತ್ರ ಶುದ್ದಿಕರಣದ ಎರಡನೇ ಭಾಗ ಪ್ರಾರಂಭವಾಯಿತು. ದೇವಳದ ಎಲ್ಲಾ ಕಡೆ ಪವಿತ್ರ ಗಂಧವನ್ನ ಹಚ್ಚುವ ಮೂಲಕ ಶುದ್ಧಿಕರಿಸಿ, ಪವಿತ್ರ ಶಿಲುಬೆಯನ್ನ ಪ್ರತಿಷ್ಟೆ ಮಾಡಲಾಯಿತು. ನಂತರ ಪವಿತ್ರ ಬಲಿಪೂಜೆಯನ್ನ ನೆರವೇರಿಸಲಾಯಿತು.
ಸೈಂಟ್ ಮೇರಿಸ್ ಓರ್ಥೋಡಾಕ್ಸ್ ಸಿರಿಯನ್ ಚರ್ಚ್ನ್ನ ಪವಿತ್ರ ತೀರ್ಥ ಕ್ಷೇತ್ರವನ್ನಾಗಿ ಇದೇ ಸಂದರ್ಭ ಘೋಷಿಸಲಾಯಿತು. ದೇವತಾ ಕಾರ್ಯಗಳಲ್ಲಿ ಬ್ರಹ್ಮಾವರ ಸೀರಿಯನ್ ಓರ್ಥೊಡಕ್ಸ್ ದರ್ಮಪ್ರಾಂತ್ಯದ ಮೆಟ್ರೋಪಾಲಿಟನ್ ವಂ. ಯಾಕೂಬ್ ಮಾರ್ ಇಲಿಯಾಸ್, ಕೊಲ್ಕತ್ತಾ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಮಾರ್ ದಿಯಾನಿಯೊಸ್, ಮುಂಬೈ ಧರ್ಮಪ್ರಾಂತ್ಯದ ಗೀರ್ ವರ್ಗೀಸ್ ಮಾರ್ ಕಾರ್ಲಿಯೋಸ್, ಅಹಮದಬಾದ್ ಧರ್ಮಪ್ರಾಂತ್ಯದ ಗೀರ್ ವರ್ಗೀಸ್ ಮಾರ್ ಯೂಲಿಸ್, ಬೆಂಗಳೂರು ದರ್ಮಪ್ರಾಂತ್ಯದ ಅಬ್ರಾಹಾಂ ಮಾರ್ ಸೆರಾಫೀಮ್ ಅವರು ಪುನರ್ ಪ್ರತಿಷ್ಠಾಪನೆಯ ದೈವೀಕ ವಿಧಿವಿಧಾನಗಳಲ್ಲಿ ಸಾಥ್ ನೀಡಿದರು.
ಕಾಥೆಡ್ರಲ್ ವಿಕಾರ್ ಜನರಲ್ ವಂ ಸಿ ಎ ಐಸಾಕ್, ಸಹಾಯಕ ಧರ್ಮಗುರುಗಳಾದ ವಂ.ಲೋರೆನ್ಸ್ ಡಿಸೋಜಾ, ವಂ ಡೇವಿಡ್ ಕ್ರಾಸ್ತಾ, ವಂ. ಅಬ್ರಾಹಾಂ ಕುರಿಯಾಕೋಸ್, ವಂ ನೋಯೆಲ್ ಲೂವಿಸ್, ವಂ ಜೋಸೆಫ್ ಚಾಕೊ, ಕ್ಯಾಥೆಡ್ರಲಿನ ಟ್ರಸ್ಟಿ ಅನಿಲ್ ರೊಡ್ರಿಗಸ್, ಕಟ್ಟಡ ನವೀಕರಣ ಸಮಿತಿಯ ಅಲನ್ ರೋಹನ್ ವಾಝ್ ಹಾಗೂ ಇತರರು ಉಪಸ್ಥಿತರಿದ್ದರು.