Breaking News

ಸೈನಿಕರ ಮತ್ತು ಪೋಲೀಸರ ಮೇಲೆ ದೌರ್ಜನ್ಯಕ್ಕೆ ಖಂಡನೆ, ಪುತ್ತೂರಿನಲ್ಲಿ ವಿ‌ಎಚ್‌ಪಿ ಬಜರಂಗದಳ ಪ್ರತಿಭಟನೆ

ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹತ್ಯೆ ಪ್ರಕರಣಗಳನ್ನು ಮತ್ತು ಪೊಲೀಸ್ ಇಲಾಖೆಯ ಮೇಲೆ ಭಯೋತ್ಪಾದನಾ ಸಂಂಘಟನೆಗಳ ಸಂಪರ್ಕ ಇರುವ ವ್ಯಕ್ತಿಗಳಿಂದ ನಡೆಯುತ್ತಿರುವ ಹಲ್ಲೆ ಘಟನೆಯನ್ನು ವಿರೋಧಿಸಿ ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪುತ್ತೂರಿನ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ಮುಖ್ಯ ರಸ್ತೆಯಾಗಿ ಬಸ್ ನಿಲ್ದಾಣದ ತನಕ ಸಾಗಿ, ಬಳಿಕ ಕೋರ್ಟು ರಸ್ತೆಯಾಗಿ ಇಲ್ಲಿನ ಮಿನಿ ವಿಧಾನ ಸೌಧತನಕ ಮೆರವಣಿಗೆಯಲ್ಲಿ ಬಂದ ಇಬ್ಬಣ ಕಾರ್ಯಕರ್ತರು ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ ಪ್ರಮುಖ್ ಮುರಲೀಕೃಷ್ಣ ಹಸಂತಡ್ಕ ಅವರು ಭಯೋತ್ಪಾದನೆ ಜಮ್ಮು ಕಾಶ್ಮೀರದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ನಡೆಯುತ್ತಿದ್ದು, ಇಂತಹ ಚಟುವಟಿಕೆ ಮಂಗಳೂರಿಗೂ ವ್ಯಾಪಿಸಿದೆ. ಪೊಲೀಸ್ ಇಲಾಖೆಯ ಮೇಲೆಯೇ ದೌರ್ಜನ್ಯ ಎಸಗುವ ಮೂಲಕ ರಕ್ಷಣಾ ವ್ಯವಸ್ಥೆಯ ಶಕ್ತಿ ಕುಂದಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

Related posts

Leave a Reply