Header Ads
Header Ads
Breaking News

ಸೈನಿಕ ಜುಬೇರ್ ದೇಶಭಕ್ತಿಗೆ ಜನತೆಯಿಂದ ಪ್ರಶಂಸೆ

ಕಾಶ್ಮೀರದ ಶ್ರೀನಗರದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಉಗ್ರರ ಹುಟ್ಟಡಗಿಸಿದ ಭಾರತೀಯ ಸೈನಿಕರ ಕಾರ್ಯಾಚರಣೆಗೆ ಎಲ್ಲೆಡೆ ಭಾರೀ ಪ್ರಸಂಶೆ ವ್ಯಕ್ತವಾಗಿದೆ. ಸೇನೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸೈನಿಕರೊಬ್ಬರೂ ಭಾಗಿಯಾಗಿದ್ದರು. ಈ ಸೈನಿಕ ನಡೆಸಿದ ಕಾರ್ಯಾಚರಣೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸೈನಿಕನ ದೇಶಭಕ್ತಿಗೆ ಜನತೆ ಭಾರೀ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೈನಿಕರ ಹಾಗೂ ಪ್ರಜೆಗಳ ಮಾರಣಹೋಮಕ್ಕೆ ಕಾರಣವಾಗುತ್ತಿರುವ ಉಗ್ರಗಾಮಿಗಳು ತನ್ನ ಕಾರ್ಯಾಚರಣೆಯನ್ನು ಹೆಚ್ಚಾಗಿ ಕಾಶ್ಮೀರದಲ್ಲೇ ನಡೆಸುತ್ತಿದ್ದಾರೆ. ಪ್ರತಿದಿನ ಈ ಉಗ್ರರ ಹೇಡಿತನದ ಕೃತ್ಯಗಳಿಂದಾಗಿ ಭಾರತೀಯ ಸೈನಿಕರು ಹಾಗೂ ಸ್ಥಳೀಯ ಜನರು ಬಲಿಯಾಗುತ್ತಿದ್ದಾರೆ. ಇಂಥಹುದೇ ಒಂದು ಕೃತ್ಯ ಎಸಗಲು ಎರಡು ದಿನಗಳ ಹಿಂದೆ ಕಾಶ್ಮೀರದ ಶ್ರೀನಗರಕ್ಕೆ ಬಂದಿದ್ದ ಉಗ್ರಗಾಮಿಗಳನ್ನು ಭಾರತೀಯ ಸೇನೆ ಹಾಗೂ ಸಿ.ಆರ್.ಪಿ.ಎಫ್ ಯೋಧರು ಯಮನ ಬಳಿ ಕಳುಹಿಸಿದ್ದಾರೆ. ಸೈನಿಕರ ಈ ಕಾರ್ಯಾಚರಣೆಗೆ ದೇಶದೆಲ್ಲೆಡೆ ಭಾರೀ ಪ್ರಸಂಶೆಯೂ ವ್ಯಕ್ತವಾಗಿತ್ತು. ಈ ಕಾರ್ಯಾಚರಣೆಯಲ್ಲಿ ದೇಶದ ಹಲವು ಭಾಗಗಳಿಂದ ಬಂದು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಭಾಗಿಯಾಗಿದ್ದರು. ಈ ತಂಡದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರ ತಾಲೂಕಿನ ಹಳೆ ನೇರಂಕಿಯ ಜುಬೇರ್ ಎನ್ನುವ ಸೈನಿಕನೂ ಭಾಗಿಯಾಗಿದ್ದಾರೆ. ಈತನು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೈನಿಕನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಹಳೆನೇರಂಕಿಯ ಜುಬೈರ್ ೨೦೧೩ ಡಿಸೆಂಬರ್ ನಲ್ಲಿ ಸಿ.ಆರ್.ಪಿ.ಎಫ್ ಗೆ ಸೇರಿದ್ದು, ಇದೀಗ ಕಳೆದ ಎರಡೂವರೆ ವರ್ಷಗಳಿಂದ ಕಾಶ್ಮೀರದ ಶ್ರೀನಗರದಲ್ಲಿ ತನ್ನ ಸೇವೆ ಸಲ್ಲಿಸುತ್ತಿದ್ದಾರೆ. ರಾಮಕುಂಜ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಫ್ರೌಢ ವಿದ್ಯಾಭ್ಯಾಸ ಪಡೆದಿರುವ ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸವನ್ನು ಪಡೆದು ಬಳಿಕ ಸೇನೆಗೆ ಸೇರಿ ದೇಶಸೇವೆಗೆ ತೊಡಗಿಕೊಂಡಿದ್ದಾರೆ.
ಚಿಕ್ಕಂದಿನಲ್ಲೂ ದೇಶದ ಬಗ್ಗೆ ಹಾಗೂ ಸೇನೆಯ ಬಗ್ಗೆ ಇದ್ದ ಉತ್ಸಾಹ ಜುಬೇರ್ ಅವರನ್ನು ಸೇನೆಗೆ ಸೇರುವಂತೆ ಪ್ರೇರೇಪಿಸಿದೆ. ನಿರಂತರ ಕಠಿಣ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿರುವ ಜುಬೇರ್ ದೇಶ ಸೇವೆಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಪಣತೊಟ್ಟು ಹೊರಟವರು. ಉಗ್ರರ ದಮನ ಕಾರ್ಯದಲ್ಲಿ ತೊಡಗಿಕೊಂಡ ಈ ಸೈನಿಕನ ದೇಶಭಕ್ತಿಗೆ ಮನೆ ಮಂದಿಯೂ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ. ಕಾಶ್ಮೀರದಂತಹ ಪ್ರದೇಶದಲ್ಲಿ ಕಾರ್ಯಾಚರಿಸುವುದು ಅತ್ಯಂತ ಕಷ್ಟದ ಕೆಲಸವಾದರೂ , ಎಲ್ಲಾ ಕಷ್ಟಗಳನ್ನು ಮರೆತು ಜುಬೈರ್ ದೇಶಸೇವೆ ಮಾಡುತ್ತಿರುವುದು ಆತನ ಮನೆ ಮಂದಿಗೂ ಗೌರವದ ವಿಚಾರವಂತೆ.

ವರದಿ: ಪ್ರವೀಣ್ ಪುತ್ತೂರು

Related posts

Leave a Reply